ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ರಾಸಾಯನಿಕ #Chemical ಸಂಗ್ರಹಿಸಿದ್ದ ಗೋಡೌನ್’ನಲ್ಲಿ ಭಾರೀ ಅಗ್ನಿ ಅನಾಹುತ #FireAccident ಸಂಭವಿಸಿದ್ದು, ಆರು ಮಂದಿ ಸಜೀವವಾಗಿ ದಹನಗೊಂಡಿರುವ ದಾರುಣ ಘಟನೆ ನಡೆದಿದೆ.
ಹೈದರಾಬಾದ್’ನ ನಾಂಪಲ್ಲಿಯ #Nampally ಬಜಾರ್ ಘಾಟ್’ನಲ್ಲಿನ ಕಟ್ಟಡದ ಮಹಡಿಯಲ್ಲಿ ಅವಘಡ ಸಂಭವಿಸಿದ್ದು, ಆರು ಮಂದಿ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.
ಘಟನೆ ಕುರಿತಂತೆ ಕೆಮಿಕಲ್ ಸಂಗ್ರಹಿಸಿ ಲ್ಯಾಬ್’ಗೆ ಕಳುಹಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post