ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಕೋಟ್ಯಂತರ ಭಾರತೀಯರ ಕನಸಾಗಿರುವ ಅಯೋಧ್ಯೆ #Ayodhya ರಾಮಮಂದಿರ ಉದ್ಘಾಟನೆ 2024ರ ಜನವರಿ 22ರಂದು ಅದ್ದೂರಿಯಾಗಿ ನಡೆಯಲಿದ್ದು, ಸಮಾರಂಭದ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯವನ್ನು ಆರಂಭಿಸಲಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾದ್ಯಮಗಳು ಸುದ್ದಿ ಪ್ರಕಟಿಸಿದ್ದು, ರಾಮ ಲಲ್ಲಾ #Ramalalla ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನ ಪತ್ರಿಕೆಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಕಳುಹಿಸಲು ಆರಂಭಿಸಲಾಗಿದೆ.

ಪ್ರಮುಖವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ, #NarendraModi ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #Yogiadityanath ಸೇರಿದಂತೆ ಪ್ರಮುಖರು ರಾಮ ಮಂದಿರದ #Ramamandira ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಾವ ಹಂತದಲ್ಲಿದೆ ಕಾಮಗಾರಿ?
ರಾಮ ಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, ರಾಮ್ ಲಲ್ಲಾದ ಮೂರು ಆವೃತ್ತಿಗಳನ್ನು ತಯಾರಿಸಲಾಗುತ್ತಿದೆ. ಅವುಗಳಲ್ಲಿ ಉತ್ತಮವಾದವು ಉದ್ಘಾಟನಾ ದಿನಾಂಕದ ಸಮೀಪದಲ್ಲಿ ಆಯ್ಕೆಯಾಗಲಿದೆ ಎಂದು ವರದಿಯಾಗಿದೆ.
ಈ ಕೊನೆಯ ಹಂತದ ತಯಾರಿಯಲ್ಲಿ, ನಿರ್ಬಂಧಿತ ವಿಶೇಷ ಸ್ಥಳದಲ್ಲಿ ರಾಮ್ ಲಲ್ಲಾ ಅವರ ಮೂರು ಆವೃತ್ತಿಗಳನ್ನು ತಯಾರಿಸಲಾಗುತ್ತಿದೆ. ಗರ್ಭಗುಡಿಯ ಮೇಲೆ ಪ್ರತಿಷ್ಠಾಪನೆಗೆ ಅಂತಿಮ ಆವೃತ್ತಿಯನ್ನು ಈ ತಿಂಗಳು ಆಯ್ಕೆ ಮಾಡುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post