ಕಲ್ಪ ಮೀಡಿಯಾ ಹೌಸ್ | ಸೂರತ್ |
ಇಲ್ಲಿನ ಖೇಡಾದಲ್ಲಿ ಆರ್ಯುವೇದಿಕ್ ಕೆಮ್ಮು ಸಿರಪ್ #CoughSyrup ಸೇವಿಸಿ ಆರು ಮಂದಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಖೇಡಾದಲ್ಲಿ ಕೆಮ್ಮು ಗುಣವಾಗಲು ಹಲವರು ಆರ್ಯುವೇದಿಕ್ #Ayurvedic ಸಿರಪ್ ಕುಡಿದಿದ್ದರು. ಇದರಲ್ಲಿ ಆರು ಮಂದಿ ಮೃತರಾಗಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ಸೂರತ್ #Surat ಡಿಸಿಪಿ ರಾಜದೀಪ್ ಅವರು ಮಾದ್ಯಮಗಳಿಗೆ ಮಾಹಿತಿ ನೀಡಿದ್ದು, ಈ ಸಿರಪ್ ಮಾರಾಟ ಹಾಗೂ ತಯಾರಿಕಾ ಜಾಲವನ್ನು ಪತ್ತೆ ಮಾಡಲು ವಿಶೇಷ ತಂಡವನ್ನು ಪೊಲೀಸರು ರಚಿಸಲಾಗಿತ್ತು. ಸೂರತ್ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡವು ಉತ್ತಮ ಯಶಸ್ಸನ್ನು ಕಂಡಿದೆ. 2195 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಗೊಡಾದ್ರದಲ್ಲಿ ಒಬ್ಬರು, ಕಪೋದ್ರಾದಲ್ಲಿ ಇಬ್ಬರು, ವರಾಚಾದಲ್ಲಿ ಇಬ್ಬರು, ಪೂನಾದಲ್ಲಿ ಒಬ್ಬರು ಮತ್ತು ಅಮ್ರೋಲಿ ಪ್ರದೇಶದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ವಶಪಡಿಸಿಕೊಂಡಿರುವ ಸಿರಪ್’ನಲ್ಲಿನ ಮದ್ಯದ ಪ್ರಮಾಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ವಶಪಡಿಸಿಕೊಂಡ ಸಿರಪ್’ಗಳ ಎಫ್’ಎಸ್’ಎಲ್ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















