ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಬೆಂಗಳೂರು |
2022ರಲ್ಲಿ ಅಪರಾಧ ಪ್ರಕರಣಗಳ Criminal Case ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿ ಮೊದಲ ಸ್ಥಾನದಲ್ಲಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಮೂರನೆಯ ಸ್ಥಾನದಲ್ಲಿದೆ.
ಈ ಕುರಿತಂತೆ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ ಮಾಹಿತಿ ಬಿಡುಗಡೆ ಮಾಡಿದ್ದು, 2022 ರಲ್ಲಿ 2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು ಸ್ಥಾನ ಪಡೆದುಕೊಂಡಿದೆ.
2020ಕ್ಕೆ ಹೋಲಿಸಿದರೆ, 1,194 ಪ್ರಕರಣಗಳು ಏರಿಕೆಯಾಗಿದ್ದು, 2020 ಮತ್ತು 2021 ಎರಡನ್ನೂ ಮೀರಿಸಿವೆ. 639 ಅಪಹರಣ ಪ್ರಕರಣಗಳ ಜೊತೆಗೆ, 763 ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು ಸೇರಿದಂತೆ ಹೆಚ್ಚಿನ ವಿಭಾಗಗಳಲ್ಲಿ, ಬೆಂಗಳೂರು ನಗರವು ದೆಹಲಿ ಮತ್ತು ಮುಂಬೈ ನಂತರ ಮೂರನೆಯ ಸ್ಥಾನದಲ್ಲಿದೆ.
Also read: ಅಧಿಕಾರಿಗಳ ತಪ್ಪು ನಿರ್ಧಾರ? ಅರ್ಜುನನ ಸಾವಿಗೆ ಮಿಸ್ ಫೈರ್ ಕಾರಣವಾಯ್ತಾ?
ಮೆಟ್ರೋಪಾಲಿಟನ್ ನಗರಗಳಲ್ಲಿ ಆರು ಆ್ಯಸಿಡ್ ದಾಳಿ ಪ್ರಕರಣಗಳು, 151 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆತಂಕಕಾರಿ ವಿಚಾರವೆಂದರೆ 151 ಅತ್ಯಾಚಾರ ಪ್ರಕರಣಗಳಲ್ಲಿ 149 ಪ್ರಕರಣಗಳು ಸಂತ್ರಸ್ಥೆಗೆ ತಿಳಿದಿರುವ ವ್ಯಕ್ತಿಗಳಿಂದಲೇ ನಡೆದಿವೆ.
ಇದಲ್ಲದೇ, ಅಪಹರಣ, ಮಾನವ ಕಳ್ಳಸಾಗಾಟ ಸೇರಿ ಹಲವು ಬಗೆಯ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post