ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಇದೇ 22ರಂದು ಪ್ರಾಣಪ್ರತಿಷ್ಠಾಪನೆಗೊಳ್ಳುತ್ತಿರುವ ಅಯೋಧ್ಯೆ #Ayodhya ರಾಮಮಂದಿರದ ಗರ್ಭಗುಡಿಗೆ ನಿರ್ಮಾಣ ಮಾಡಲಾಗಿರುವ ಚಿನ್ನದ ಲೇಪಿತ ಬಾಗಿಲುಗಳ #GoldenDoor ಮೊದಲ ಫೋಟೋ ಹೊರಬಿದ್ದಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ದೇವಾಲಯದ ಗರ್ಭಗುಡಿ ಪೂರ್ಣಗೊಂಡಿದ್ದು, ಶಂಕುಸ್ಥಾಪನೆ ಸಮಾರಂಭಕ್ಕಾಗಿ ಕಾಯುತ್ತಿದೆ ಎಂದು ಘೋಷಿಸಿದೆ. 500 ವರ್ಷಗಳ ತಪಸ್ಸಿನ ಪರಾಕಾಷ್ಠೆ. ಪ್ರಭು ಶ್ರೀ ರಾಮಲಲ್ಲಾ ಅವರ ಪವಿತ್ರ ಗರ್ಭಗೃಹವು ಪ್ರಪಂಚದಾದ್ಯಂತ ಲಕ್ಷಾಂತರ ರಾಮಭಕ್ತರ ಆರಾಧ್ಯವನ್ನು ಸ್ವಾಗತಿಸಲು ತನ್ನ ಎಲ್ಲಾ ವೈಭವದಲ್ಲಿ ಸಿದ್ಧವಾಗಿದೆ ಎಂದು ಟ್ರಸ್ಟ್ ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಚಿತ್ರದಲ್ಲಿ ಪ್ರಕಟವಾಗಿರುವುದು ರಾಮ ಮಂದಿರದ ಗರ್ಭಗೃಹದ #GarbhaGruha 11ನೇ ಸ್ವರ್ಣ ದ್ವಾರ, ಮಂದಿರದಲ್ಲಿ ಒಟ್ಟು 13 ಇದೇ ರೀತಿಯ ಬಾಗಿಲುಗಳು ಇರಲಿದೆ ಎಂದು ದೇವಸ್ಥಾನದ ಟ್ರಸ್ಟ್ ಖಚಿತಪಡಿಸಿದೆ.
ದೇವಾಲಯದ #Temple ಗರ್ಭಗುಡಿ ಅಥವಾ ‘ಗರ್ಭಗೃಹ’ದಲ್ಲಿ ಭಾರವಾದ ಚಿನ್ನದ ಲೇಪಿತ ಬಾಗಿಲುಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ ದೇವರ ವಿಗ್ರಹವನ್ನು ಜನವರಿ 22 ರಂದು ಪ್ರತಿಷ್ಠಾಪಿಸಲಾಗುತ್ತದೆ. ಹೈದರಾಬಾದ್ ಮೂಲದ ಕುಶಲಕರ್ಮಿಯೊಬ್ಬರು ಬಾಗಿಲನ್ನು ಮಾಡಿದ್ದಾರೆ.
ಗರ್ಭಗೃಹದ ಎದುರು ಇರುವ ಗುರು ಮಂಟಪಕ್ಕೆ ಹಾಕಲಾಗಿರುವ ಚಿನ್ನದ ದ್ವಾರ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಗಳು ವೈರಲ್ ಆದ ಬೆನ್ನಲ್ಲಿಯೇ ರಾಮ ಭಕ್ತರು ದ್ವಾರದ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ. ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವಿದ್ದು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ.
ಲಕ್ಷಾಂತರ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕೇಂದ್ರ ಬಿಂದುವಾದ `ಪ್ರಾಣ ಪ್ರತಿಷ್ಠಾ’ ಅಥವಾ ಭವ್ಯ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭವು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಹಲವಾರು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post