ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಶ್ರೀರಾಮಲಲಾ #RamaLalla ಪ್ರಾಣಪ್ರತಿಷ್ಠಾಪನೆಯ ವಿಧಿವಿಧಾನ ಅಧಿಕೃತವಾಗಿ ಆರಂಭವಾಗಿದ್ದು, ಈ ಮೂಲಕ ಐತಿಹಾಸಿಕ ಅಮೃತಗಳಿಗೆ ಮತ್ತಷ್ಟು ಸನಿಹಗೊಂಡಿದೆ.
ಇಂದು ಮುಂಜಾನೆ ಪ್ರಾಣಪ್ರತಿಷ್ಠಾಪನೆಯ #PranaPratishtapan ವಿಧಿವಿಧಾನ ಆರಂಭವಾಗಿದ್ದು, 114 ಕಲಶಗಳಿಂದ ವಿವಿಧ ಔಷಧೀಯ ನೀರಿನಿಂದ ವಿಗ್ರಹದ ಸ್ನಾನ ನಡೆಸಲಾಯಿತು. ಕಲಶಗಳ ನೀರಿನಿಂದ ಮೂರ್ತಿಗಳ ಪುಣ್ಯಸ್ನಾನದ ಬಳಿ ಪ್ರತಿಷ್ಠಾಪಿಸಿರುವ ದೇವತೆಗಳಿಗೆ ನಿತ್ಯಪೂಜೆ, ಹವನ, ಪಾರಾಯಣ ನಡೆದಿದೆ.
ಪ್ರಾತಃಕಾಲ ಮಾಧ್ವಾಧೀನಗಳು, ಮಹಾ ಪೂಜೆ, ಉತ್ಸವ ಮೂರ್ತಿ ಪ್ರಸಾದ ಪರಿಕ್ರಮ, ಶಾಯಾದಿ, ತತ್ತ್ವನ್ಯಾಯ, ಮಹನ್ಯಾಸ, ಆದಿನ್ಯಾಸ, ಅಘೋರ ಹೋಮ, ವ್ಯಾಹೃತಿ ಹೋಮ, ಜಾಗರಣ, ಸಂಜೆ ಪೂಜೆ ಹಾಗೂ ಆರತಿ ನಡೆಯಿತು.

ಪ್ರಧಾನಿ ಎಷ್ಟೊತ್ತಿಗೆ ಪ್ರವೇಶಿಸಲಿದ್ದಾರೆ?
10.25ಕ್ಕೆ ಅಯೋಧ್ಯೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ #PMNarendraModi ಅವರು, 12.20ಕ್ಕೆ ಕಲಶದಲ್ಲಿ ಸರಯು ನದಿ ನೀರು ಹಿಡಿದು ಗರ್ಭಗುಡಿ ಪ್ರವೇಶಿಸಲಿದ್ದಾರೆ.
ಶ್ರೀ ಶೋಭಕೃತ್ ನಾಮ ಸಂವತ್ಸರ, ಹೇಮಂತ ಋತು, ಪುಷ್ಯ ಮಾಸ, ಶುಕ್ಲಪಕ್ಷ, ದ್ವಾದಶಿ, ಉತ್ತರಾಯಣ, ಮೃಗಶಿರಾ ನಕ್ಷತ್ರ, ಅಭಿಜಿತ್ ಲಗ್ನದ ಸಮಯವಾದ ಮಧ್ಯಾಹ್ನ 12.30ರ ವೇಳೆಗೆ ಬಾಲರಾಮನನ್ನು ಪ್ರತಿನಿಧಿಸುವ ಸುಂದರ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















