ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣ ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಸ್ತ್ರ ಸಂಹಿತೆ ಜಾರಿ Dress code in Hampi ಮಾಡಲಾಗಿದೆ.
ಹೌದು, ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಸ್ತ್ರ ಸಂಹಿತೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾಧಿಕಾರಿ ದಿವಾಕರ್ ಮತ್ತು ಶಾಸಕ ಗವಿಯಪ್ಪ ಖುದ್ದು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

Also read: ಜಗದೀಶ್ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ: ಬೆಳಗಾವಿ ಕಣದಲ್ಲಿ ಗರಿಗೆದರಿದ ಲೋಕಸಭಾ ಟಿಕೆಟ್ ಲೆಕ್ಕಾಚಾರ
ವಿರೂಪಾಕ್ಷನ ದರ್ಶನ ಪಡೆಯಲು ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದ್ದು, ಇನ್ನು ಮುಂದೆ ಬರ್ಮುಡ, ಜೀನ್ಸ್ ಚಡ್ಡಿ ಧರಿಸಿ ಬಂದರೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಹಾಗೂ ಪಂಚೆ ತೊಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಮಹಿಳೆಯರು ಸಹ ತುಂಡುಡುಗೆಯಲ್ಲಿ ಬಂದರೆ ಮೇಲೆ ಶಲ್ಯ ತೊಡಬೇಕಾಗಿದೆ. ಕೊಡುವ ವಸ್ತ್ರಕ್ಕೆ ಸದ್ಯ ಶುಲ್ಕ ಪಡೆಯುತ್ತಿಲ್ಲ. ದೇವರ ದರ್ಶನ ಮಾಡಿದ ಬಳಿಕ ವಸ್ತ್ರವನ್ನು ವಾಪಸ್ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ದಿವಾಕರ್ ಸೇರಿದಂತೆ ಕೆಲ ಗಣ್ಯರು ಭಕ್ತರಿಗೆ ಲುಂಗಿ, ಪಂಚೆಯನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post