ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೆಳೆಯ ವೃಂದದ ವತಿಯಿಂದ ಕೆ.ಆರ್. ಪುರಂ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ದಾಸ ಶ್ರೇಷ್ಠರಾದ ಶ್ರೀ ಗೋಪಾಲದಾಸರ ಆರಾಧನಾ ಮಹೋತ್ಸವವನ್ನುಆಚರಿಸಲಾಯಿತು.
ಈ ಪ್ರಯುಕ್ತ ಇಂದು ಬೆಳಿಗ್ಗೆ ನಗರದ ಕೆ.ಆರ್.ಪುರಂ, ತಿಮ್ಮಪ್ಪನ ಕೊಪ್ಪಲು ಮತ್ತು ತುಮಕೂರು ಶ್ಯಾಮರಾವ್ ರಸ್ತೆಯ ಬಡಾವಣೆಗಳಲ್ಲಿ ಗೋಪಾಲದಾಸರ ಕೀರ್ತನೆಗಳನ್ನು ಹಾಡುತ್ತ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು. ನಂತರ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ಭಜನಾ ಮಂಡಳಿ ವತಿಯಿಂದ ಭಜನಾ ಹಾಗೂಶ್ರೀ ಗೋಪಾಲದಾಸರ ದಾಸರ ಬಗ್ಗೆ ಉಪನ್ಯಾಸ ನಡೆಸಲಾಯಿತು.
Also read: ಪ್ರಧಾನಿ ಮೋದಿಯವರ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಮಾರ್ಗಸೂಚಿ ಈ ಬಜೆಟ್: ಅಮಿತ್ ಶಾ
ಈ ಸಂದರ್ಭದಲ್ಲಿ ಹೆಚ್.ಎಸ್. ನಾಗೇಂದ್ರ, ಟಿ.ವಿ. ಬಿಂದು ಮಾಧವ, ವಸಂತ ರಾವ್, ಎಮ್.ಜಿ. ವಾಸುದೇವ ಮೂರ್ತಿ, ಕೆ. ಪ್ರಹ್ಲಾದ, ಕುಷ್ಠಗಿ ಅನಂತಾಚಾರ್, ಕುಷ್ಠಗಿ ಸುಧಾ ಅನಂತಾಚಾರ್, ಸುಭದ್ರಾ ವಸಂತರಾವ್, ಕುಷ್ಠಗಿ ಅನಂತಾಚಾರ್, ಭೀಮಸೇನಾಚಾರ್ಯ, ಅನಂತ ರಾಮದ್ಯಾನಿ, ಸತ್ಯನಾರಾಯಣ ರಾವ್, ಅಪ್ಪಿ ಶ್ರೀಧರ, ರಾಯಚೂರು ಕೃಷ್ಣಾಚಾರ್, ಕುಷ್ಟಗಿ ವಾಸುದೇವ ಮೂರ್ತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















