ಕಲ್ಪ ಮೀಡಿಯಾ ಹೌಸ್ | ರಾಣೆಬೆನ್ನೂರು |
ಕಾಲ ಬದಲಾದಂತೆ ಸಾಮಾಜಿಕ ಸ್ಥರಗಳಲ್ಲಿ ಆಗುವ ಬದಲಾವಣೆಗೆ ಎಲ್ಲರೂ ಹೊಂದಿಕೊAಡು ಬಾಳುವುದನ್ನು ಕಲಿಯಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಕರೆ ನೀಡಿದರು.
ತಾಲೂಕಿನ ಕಾಕೋಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಗರಿಕ ಸಮಾಜದಲ್ಲಿ ಮಾನವ ಕಾಲಮಾನಕ್ಕೆ ತಕ್ಕಂತೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊAಡು ಅನ್ಯೋನ್ಯತೆಯಿಂದ ಬಾಳುವುದು ಅವಶ್ಯಕವಾಗಿದೆ ಎಂದರು.
Also read: ಚುನಾವಣಾ ಬಾಂಡ್ | ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು | ನ್ಯಾಯಾಲಯ ಉಲ್ಲೇಖಿಸಿದ್ದೇನು?
ಯುವ ನಾಯಕ ಕೆ.ಈ. ಕಾಂತೇಶ್ K E Kanthesh ಮಾತನಾಡಿ, ಸಮಾಜದಲ್ಲಿ ಅನ್ಯೋನ್ಯತೆ, ಸಹಬಾಳ್ವೆ ಸ್ಥಾಪಿಸಲು ಪ್ರತಿ ಕುಟುಂಬವೂ ಸಹ ಮುಖ್ಯವಾಗಿದೆ. ಪ್ರತಿ ಕುಟುಂಬದಲ್ಲಿ ಪ್ರೀತಿ, ಅನ್ಯೋನ್ಯತೆ, ಹೊಂದಾಣಿಕೆ ಇದ್ದಾಗ ಇಂತಹುz್ದೆÃ ಸಮಾಜ ಸ್ಥಾಪನೆಯಾಗಲು ಇದು ಬುನಾದಿಯಾಗುತ್ತದೆ ಎಂದರು.
ತಾಲ್ಲೂಕಿನ ಸುಕ್ಷೇತ್ರ ಕಾಕೋಳ ಗ್ರಾಮದ ಪ್ರಭುಸ್ವಾಮಿ ಮಠದ ನಿಜೈಕ್ಯ ಮ.ನಿ.ಪ್ರ.ಶ್ರೀ ಗುರು ಶರಣಬಸವೇಶ್ವರರ 155ನೇ ಪುಣ್ಯಾರಾಧನೆ ನಡೆಯಿತು. ಈ ಅಂಗವಾಗಿ ಉಚಿತವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈಶ್ವರಪ್ಪ ಅವರ ಕುಟುಂಬಸ್ಥರು ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post