ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಕಳೆದ ಕೆಲವು ತಿಂಗಳ ಹಿಂದೆ ಸದ್ದು ಮಾಡಿದ್ದ ಅಪರಿಚಿತರ ಗುಂಡಿನ ದಾಳಿ ಮತ್ತೆ ಈಗ ಸದ್ದು ಮಾಡುತ್ತಿದ್ದು, ಪಾಕಿಸ್ಥಾನದ ಕುಖ್ಯಾತ ಡಾನ್ ಅಮೀರ್ ಬಾಲಾಜ್ ಟಿಪುಯನ್ನು Pakistana Don Amir Balaj Tipu ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
Goods transport network owner Ameer Balaj Tipu, was shot dead by an unknown assailant during a wedding ceremony in Chung area on Sunday, reported a private TV channel. Balaj Tipu was the son of Arif Amir, alias Tipu Truckanwala, who was also murdered in 2010 at the Allama Iqbal… pic.twitter.com/W0gmh7L1VN
— Imran Jami (@ImrankJami) February 19, 2024
ಪಾಕಿಸ್ಥಾನದ ಚುಂಗ್ ವಲಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಟಿಪು ಮೇಲೆ ಅಪರಿಚಿತರ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಸತ್ತಿದ್ದಾನೆ.

Also read: ಚಂದ್ರಗುತ್ತಿ ಜಾತ್ರೆ ದಿನಾಂಕ ನಿಗದಿ | ಯಾವಾಗ, ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
ದಾಳಿಯಲ್ಲಿ ಲೆಕ್ಕವಿಲ್ಲದಷ್ಟು ಗುಂಡುಗಳು ಟಿಪು ದೇಹವನ್ನು ಹೊಕ್ಕಿದ್ದು, ತತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತರ ಕುರಿತಾಗಿ ಯಾವುದೇ ಮಾಹಿತಿಯೂ ಸಹ ಪೊಲೀಸರಿಗೆ ದೊರೆತಿಲ್ಲ. ಯಾರು, ಎಲ್ಲಿಂದ ಬಂದರು, ಯಾಕೆ ಗುಂಡಿನ ದಾಳಿ ನಡೆಸಿದರು ಎಂಬ ಮಾಹಿತಿಯೇ ಇಲ್ಲ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post