ಕಲ್ಪ ಮೀಡಿಯಾ ಹೌಸ್ | ಕಡಬ(ಮಂಗಳೂರು) |
ಕಾಲೇಜಿಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಮುಸುಕುಧಾರಿಯೊಬ್ಬ ಆಸಿಡ್ ದಾಳಿ ನಡೆಸಿದ್ದು, ದಕ್ಷಿಣ ಕನ್ನಡ ಬೆಚ್ಚಿ ಬಿದ್ದಿದೆ.
ಜಿಲ್ಲೆಯ ಕಡಬ ಸರ್ಕಾರಿ ಕಾಲೇಜಿನ ಬಳಿಯಲ್ಲಿ ಘಟನೆ ನಡೆದಿದೆ.
ಕಾಲೇಜಿಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಮಾಸ್ಕ್ ಹಾಗೂ ಟೋಪಿ ಧರಿಸಿ ಬಂದಿದ್ದ ಆರೋಪಿ ಏಕಾಏಕಿ ಆಸಿಡ್ ಎರಚಿ, ಪರಾರಿಯಾಗಿದ್ದಾನೆ.
ಆಸಿಡ್ ದಾಳಿಗೆ ಒಳಗಾಗಿರುವ ಮೂವರನ್ನು ಅಲೀನಾ, ಅರ್ಚನಾ, ಅಮೃತ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಆರೋಪಿಯು ಕೇರಳ ಮೂಲದವನಾಗಿದ್ದು, ಆತನನ್ನು ಅಬೀನ್ ಎಂದು ಗುರುತಿಸಲಾಗಿದೆ.
ಈಗಾಗಲೇ ಆತನನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕೃತ್ಯಕ್ಕೆ ಕಾರಣವೇನು ಎಂಬುದನ್ನು ವಿಚಾರಣೆ ನಂತರ ತಿಳಿದುಬರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post