ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣಾ Parliament Election ದಿನಾಂಕ ಘೋಷಣೆಯಾಗಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ.
ಈ ಕುರಿತಂತೆ ಮಾತನಾಡಿರುವ ಸಿಇಸಿ ರಾಜೀವ್ ಕುಮಾರ್, CEC Rajiv Kumar ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಮಟ್ಟದ ಮತದಾನ ಆಗಬೇಕು ಎಂಬುದಕ್ಕೆ ನಾವು ಸಂಕಲ್ಪಿಸಿದ್ದೇವೆ ಎಂದರು.
85 ವರ್ಷ ಮೀರಿದವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ನಿಯಮಾವಳಿಯಂತೆ ನೋಂದಣಿ ಮಾಡಿಕೊಳ್ಳಬೇಕು ಎಂದರು.
Also read: ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕ್ಷಣಗಣನೆ: ಹೇಗಿದೆ ಸಿದ್ಧತೆ?
ಇನ್ನು ದೇಶದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.40ಕ್ಕೂ ಅಧಿಕ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಈ ಕ್ರಮ ದೇಶದ ಇತಿಹಾಸದಲ್ಲೇ ಮೊದಲು ಎಂದು ಆಯುಕ್ತರು ತಿಳಿಸಿದರು.
ದೇಶದಲ್ಲಿ ಎಷ್ಟಿದ್ದಾರೆ ಮತದಾರರು?
ಈ ಬಾರಿ ದೇಶದಲ್ಲಿ 97 ಕೋಟಿ ಮತದಾರರಿದ್ದು, 49 ಕೋಟಿ ಪುರುಷ ಹಾಗೂ 47.15 ಮಹಿಳಾ ಮತದಾರರಿದ್ದಾರೆ. 88 ಲಕ್ಷ ವಿಶೇಷ ಚೇತನ, 1.98 ಕೋಟಿ 80 ವರ್ಷ ದಾಟಿದ ಮತದಾರರು, 2.18 ಲಕ್ಷ ಶತಾಯುಷಿ, 18-19 ವರ್ಷದೊಳಗಿನ ಯುವ ಮತದಾರರು ದೇಶದಲ್ಲಿ 85.3 ಲಕ್ಷ ಹಾಗೂ 1.82 ಕೋಟಿ ಮಂದಿ ಮೊದಲ ಬಾರಿಗೆ ಮತದಾನ ಮಾಡುವವರಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖವಾಗಿ 17 ವರ್ಷ ತುಂಬದ 13.4 ಲಕ್ಷ ಯುವಕರಿಂದ ಅರ್ಜಿ ಬಂದಿದೆ. ಇದರಲ್ಲಿ ಎಪ್ರಿಲ್ 1ಕ್ಕೆ 18 ವರ್ಷ ಆಗುವವರಿಗೆ ಮಾತ್ರ ಮತದಾನದ ಅವಕಾಶ ನೀಡಲಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post