ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ Geetha Shivarajkumar ಅವರು ಪ್ರಚಾರ ಆರಂಭಿಸುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಗೆ ಆಗಮಿಸಿದ್ದು, ಅವರನ್ನು ಜಿಲ್ಲಾ ಗಡಿ ತಾಲೂಕಿನ ಕಾರೇಹಳ್ಳಿ ಬಳಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಇಂದಿನಿಂದ ಅಧಿಕೃತವಾಗಿ ಪ್ರಚಾರ ಆರಂಭಿಸಲು ಗೀತಾ ಶಿವರಾಜಕುಮಾರ್ ಹಾಗೂ ಅವರ ಪರಿ ಶಿವರಾಜಕುಮಾರ್ ಇಬ್ಬರೂ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಜಿಲ್ಲಾ ಗಡಿ ಕಾರೇಹಳ್ಳಿ ಬಳಿಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್, ಯುವ ಮುಖಂಡ ಗಣೇಶ್, ಕಾಂಗ್ರೆಸ್ ಪ್ರಮುಖರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಗೀತಾ ಶಿವರಾಜಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
Also read: ಬೀರೂರು ಪ್ರೀತಿ ಕ್ಯಾಂಟೀನ್’ನಲ್ಲಿ ತಿಂಡಿ ಸವಿದ ಹ್ಯಾಟ್ರಿಕ್ ಹೀರೋ ಶಿವಣ್ಣ
ಅದ್ದೂರಿ ಬೈಕ್ ರ‍್ಯಾಲಿ
ಕಾರೇಹಳ್ಳಿಯಲ್ಲಿ ಗೀತಾ ಶಿವರಾಜಕುಮಾರ್, ಶಿವರಾಜಕುಮಾರ್, ಶಾಸಕ ಬಿ.ಕೆ. ಸಂಗಮೇಶ್ವರ್ ಅವರುಗಳು ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.
ಕಾರೇಹಳ್ಳಿಯಿಂದ ಹೊರಟ ರ‍್ಯಾಲಿ, ಕೆಂಪೇಗೌಡ ನಗರ, ಬಾರಂದೂರು, ಮಸರಹಳ್ಳಿ, ಮಾರುತಿನಗರ, ಶಿವನಿ ಕ್ರಾಸ್, ಸಾದತ್ ಕಾಲೋನಿ, ಗಾಂಧಿ ಸರ್ಕಲ್, ಒಎಸ್’ಎಂ ರಸ್ತೆ (ಶಾಸಕರ ಮನೆ ಮುಂಭಾಗ), ರಂಗಪ್ಪ ಸರ್ಕಲ್, ಸಿಎನ್ ರಸ್ತೆ, ಮಾಧವಾಚಾರ್ ಸರ್ಕಲ್, ಬಿಎಚ್ ರಸ್ತೆ, ಅಂಡರ್ ಬ್ರಿಡ್ಜ್, ಉಂಬ್ಳೆಬೈಲ್ ರಸ್ತೆ, ಜಯಶ್ರೀ ಸರ್ಕಲ್, ಜನ್ನಾಪುರ, ಸಿದ್ದಾಪುರ, ಬೈಪಾಸ್’ವರೆಗೂ ಸಾಗಿತು.
ನಗರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರೂ ಆದ ಬಿ.ಕೆ. ಮೋಹನ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















