ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಚುನಾವಣಾ ಯುದ್ದ ಆರಂಭವಾಗಿದ್ದು, ಯುದ್ದ ಭೂಮಿಯಲ್ಲಿ ನಮ್ಮ ಅಕ್ಕಪಕ್ಕ ಯಾರಿದ್ದಾರೆ ಎಂದು ನೋಡದೇ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೊಂದೆ ನಮ್ಮ ಗುರಿಯಾಗಿದ್ದು ಅದಕ್ಕಾಗಿ ಪ್ರಹ್ಲಾದ್ ಜೋಶಿಯವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ Basavaraja Bommai ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವು ಯದ್ದಭೂಮಿಯಲ್ಲಿದ್ದೇವೆ. ಯುದ್ದ ಪ್ರಾರಂಭವಾಗಿದೆ. ಯದ್ಧಭೂಮಿಯಲ್ಲಿ ನಮಗೆ ಗುರಿ ಕಾಣಬೇಕು. ಅಕ್ಕ ಪಕ್ಕ ಇರುವವರು ಯಾರು ಅಂತಾ ನೋಡಬಾರದು. ನಮ್ಮ ಗುರಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಹೀಗಾಗಿ ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ್ ಜೋಶಿ ಗೆಲ್ಲಬೇಕು ಎಂದು ಹೇಳಿದರು.
ನಾನು ಲೋಕಸಭೆಗೆ ಯಾಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹಲವು ಬಾರಿ ಹೇಳಿದ್ದೇನೆ. ಪ್ರತಿಯೊಬ್ಬರಿಗೂ ಸೂರು ಸಿಗಬೇಕೆಂದರೆ ಮೋದಿ ಪ್ರಧಾನಿ PM Modi ಆಗಬೇಕು ಎಂದರು.
ಜೋಶಿ ಅವರು ಅತ್ಯಂತ ದಕ್ಷತೆಯಿಂದ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನಮಗೆಲ್ಲ ಜೋಶಿ ಅವರು ಹೆಸರು ತಂದಿದ್ದಾರೆ. ಯಾವ ಸಂಸದರೂ ಮಾಡದ ಕೆಲಸ ಜೋಶಿ ಮಾಡಿದ್ದಾರೆ ಎಂದು ಪ್ರಲ್ಹಾದ್ ಜೋಶಿಯನ್ನು ಮಾಜಿ ಸಿಎಮ್ ಬೊಮ್ಮಾಯಿ ಹೊಗಳಿದರು.
ಇಬ್ಬರು ಎಂಪಿ
ಶಿಗ್ಗಾವಿ ಕ್ಷೇತ್ರದ ಕಾರ್ಯಕರ್ತರಿಗೆ ಇನ್ಮೇಲೆ ನಿಮಗೆ ಇಬ್ಬರು ಎಂಪಿ ಗಳು ಎಂದ ಬಸವರಾಜ್ ಬೊಮ್ಮಾಯಿ ಪರೋಕ್ಷವಾಗಿ ತಾವು ಸಂಸದರಾಗುವುದು ಖಚಿತ ಎಂದು ಹೇಳಿದರು. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ಶಿಗ್ಗಾಂವಿಯನ್ನು ನಾನು ಬಿಡುವುದಿಲ್ಲ ಎಂದರು.
Also read: ಭದ್ರಾವತಿ ನಿರ್ಮಲಾ ಆಸ್ಪತ್ರೆಗೆ ಬಯೋಕ್ಲಿನಿಕಲ್ ಯಂತ್ರ ಕೊಡುಗೆ
ಈ ಚುನಾವಣೆಯಲ್ಲಿ ಕಳೆದ ಬಾರಿಗಿಂದ ನಮಗೆ ಪ್ರತಿ ಗ್ರಾಮದಲ್ಲಿ 100 ಮತಗಳು ಹೆಚ್ಚಾಗಬೇಕು. ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ನೀವೆ ಅಭ್ಯರ್ಥಿ ಗಳಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನೀವು ಶಿಗ್ಗಾಂವಿಯಿಂದ ಜೋಶಿ ಅವರಿಗೆ ಲೀಡ್ ಕೊಟ್ಟರೆ ನನಗೆ ಗೌರವ ಹೆಚ್ಚಾಗುತ್ತದೆ. ಜೋಶಿ ಅವರು ಐದು ಲಕ್ಷಗಳ ಮತರದಿಂದ ಗೆಲ್ಲುತ್ತಾರೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post