ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಧರ್ಮದ ಹೆಸರಿನಲ್ಲಿ ಮತ ಯಾಚನೆ ಮಾಡುತ್ತಾ, ಮಠ ಮಾನ್ಯಗಳ ಗುರುಗಳನ್ನು ಭೇಟಿಯಾಗಿ ತಮಗೆ ಆರ್ಶೀವದಿಸಿ ಎಂದು ಬೇಡುತ್ತಿರುವ ಕೆ.ಎಸ್. ಈಶ್ವರಪ್ಪ #KSEshwarappa ಹಾಗೂ ಬಿ.ವೈ. ರಾಘವೇಂದ್ರ #BYRaghavendra ಅವರುಗಳ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಬೇಕು ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ #AyanurManjunath ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಹಿಂದುತ್ವವನ್ನು ದುರ್ಲಾಭ ಮಾಡಿಕೊಂಡು ಓಟು ಕೇಳುತ್ತಿರುವ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಜಾತಿ ಮತ ಧರ್ಮ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಇನ್ನೂ ಗಮನಹರಿಸಿದಿರುವುದು ನೋವಿನ ಸಂಗತಿ. ಕೂಡಲೇ ದೂರು ದಾಖಲಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಧರ್ಮದ ಆಧಾರದ ಮೇಲೆ ಮತಯಾಚಿಸುತ್ತಿರುವ ಈಶ್ವರಪ್ಪನವರ ವಿರುದ್ಧ ದೂರು ದಾಖಲಾಗಬೇಕಿತ್ತು. ಅವರ ಮೇಲೆ ಮಾತ್ರ ಅಲ್ಲ ಅವರ ಹಾಗೂ ಧರ್ಮದ ಪರವಾಗಿ ಮಾತನಾಡಿರುವ ಸ್ವಾಮೀಜಿಗಳ ಮೇಲೂ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಧರ್ಮದ ಆಧಾರದ ಮೇಲೆ ಮತಯಾಚಿಸಿದ್ದಾರೆ. ಕೂಡಲೇ ಚುನಾವಣೆ ಆಯೋಗ ಈಶ್ವರಪ್ಪ ಮತ್ತು ಬಿವೈಆರ್ ವಿರುದ್ಧವೂ ದೂರು ದಾಖಲಿಸಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post