ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯ ಬಂಡಾಯದ ಡಮ್ಮಿ ಕ್ಯಾಂಡಿಡೇಟ್ ಆಗಿ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ #AyanurManjunath ಕಟಕಿಯಾಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಶ್ವರಪ್ಪನವರ #KSEshwarappa ಬೆನ್ನಿಗೆ ನಾನು ನಿಂತ ಕಾರಣ ಪುರಲೆಯಲ್ಲಿ 1 ಸಾವಿರ ಮತ ಬಂದಿದ್ದವು. 1989 ರಲ್ಲಿ ಅವರಿಗೆ ಲಿಂಗಾಯಿತ ಮುಖವಾಡ ಹಾಕಿದ್ದರಿಂದ ಮತ ಬಂದಿದೆ ಎಂದು ಹಿಂದಿನ ನೆನಪು ಹೇಳಿದರು.
ಈಶ್ವರಪ್ಪನವರನ್ನು ಸ್ಪರ್ಧಿಸುವ ಮೂಲಕ ರಾಘವೇಂದ್ರರನ್ನು ಗೆಲ್ಲಿಸುವ ಒಳ ಒಪ್ಪಂದವಿದೆ. ಅವರೇ ಒಪ್ಪಿಕೊಂಡಂತೆ ಚುನಾವಣೆಯ ನಂತರ ಈಶ್ವರಪ್ಪನವರನ್ನ ರಾಜ್ಯಪಾಲರನ್ನಾಗಿಸುವ ಮತ್ತು ಪುತ್ರ ಕಾಂತೇಶ್ ಗೆ ಎಂಎಲ್’ಸಿ ಸ್ಥಾನ ಸಿಗಲಿದೆ ಎಂದು ದೂರಿದರು.

ಧೈರ್ಯ ಮಾಡುವ ಸ್ವಭಾವ ಈಶ್ವರಪ್ಪನವರದ್ದು ಅಲ್ಲ. ಆದರೂ ಹಠ ಹಿಡಿದಿದ್ದಾರೆ. ಎಕ್ಸಟ್ರಾ ಬ್ಯಾಟರಿ ಹೇಗೆ ಬಂತು ಎಂಬುದಕ್ಕೆ ಈ ಒಳ ಒಪ್ಪಂದ ಕಾರಣವಾಗಿದೆ. ಜಾಗೃತ ಜನ ಬಿಜೆಪಿ ಅಭ್ಯರ್ಥಿ ಮತ್ತು ಈಶ್ವರಪ್ಪನವರನ್ನು ತಿರಸ್ಕರಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಅವರನ್ನ ಗೆಲ್ಲಿಸಲಿದ್ದಾರೆ ಎಂದರು.
ಉದಾತ ಹೋರಾಟಗಾರ, ದಿಟ್ಟ ರಾಜಕಾರಣಿ ಬಂಗಾರಪ್ಪನವರು ಮತ್ತು ಅವರ ಕುಟುಂಬದವರು ಹೊಂದಾಣಿಕೆ ಮಾಡಿಕೊಳ್ಳುವವರಲ್ಲ. 40% ಆರೋಪ ಎದುರಿಸಿದ ಈಶ್ವರಪ್ಪನವರಿಗೆ ಐಟಿ ಇಡಿ ದಾಳಿಯ ಬೆದರಿಕೆ ಇದೆ. ಹಾಗಾಗಿ ಈಶ್ವರಪ್ಪನವರು ಸ್ಪರ್ಧೆ ಖಚಿತವಾಗಿದೆ ಎಂದರು.

ತಂಡೋಪ ತಂಡವಾಗಿ ಸ್ವಾಮೀಜಿ ಬಳಿ ಹೋಗಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆ. ಕೇವಲ ಆಶೀರ್ವಚನ ಪಡೆದುಕೊಂಡು ಬಂದರೆ ಏನೂ ಆಗೊಲ್ಲ ಎಂದ ಆಯನೂರು ಅಂತೂ ಇಂತೂ ರಾಜಕೀಯ ಪೌರುಷವನ್ನ ಈಶ್ವರಪ್ಪ ಪ್ರದರ್ಶಿಸುತ್ತಿದ್ದಾರೆ. ನನಗೆ ಚಿಂತೆ ಆಗಿದೆ. ನನ್ನ ಓಟು ಅವರಿಗೆ ಹೋಗುತ್ತದೆ ಎಂಬ ಚಿಂತೆ ಆರಂಭವಾಗಿದೆ ಎಂದು ಲೇವಡಿ ಮಾಡಿದರು.
ನಾವು ಒಂದೇ ಗರಡಿಯಲ್ಲಿ ಬೆಳೆದವರು, ಅವರ ಮುಖವಾಡದ ಪಟ್ಟು ಗೊತ್ತಾಗಿದೆ. ಅವರ ಕೋರ್ ಕಮಿಟಿಯ ಮಾಹಿತಿ ನನ್ನ ಬಳಿ ಇದೆ. ಅವರನ್ನ ರಾಜಕೀಯ ಹೇಡಿ ಎಂದುಕೊಕೊಂಡಿದ್ದಾರೆ. ಧೀರರಾಗಿ ರಾಜಕಾರಣ ಮಾಡಲಿ ಎಂದು ಆಶಿಸಿದರು. ನಾನು ಅವರಿಗೆ ಮತಹಾಕುವುದಾಗಿ ಹೇಳಿದರು.
ಬಿಜೆಪಿಯ ಯಾವ ನಾಯಕರು ಈಶ್ವರಪ್ಪನವರ ವಿರುದ್ಧ ಮಾತನಾಡಿಲ್ಲ. ರಾಜಕೀಯ ದಾಳವಾಗಿ ಈಶ್ವರಪ್ಪನವರನ್ನ ಬಿಜೆಪಿ ಬಳಸಿಕೊಂಡಿದ್ದು, ಸ್ಪಾನ್ಸರ್ ಆಗಿ ಅವರನ್ನ ಸ್ಪರ್ಧೆಗೆ ಕಣಕಿಳಿಸಲಾಗಿದೆ ಎಂದು ದೂರಿದರು.
ಅವರು ರಾಜ್ಯಪಾಲರಾದರೆ ಸಂವಿಧಾನ ಉಳಿಯುತ್ತಾ? ಸಂವಿಧಾನಕ್ಕೆ ಅಪಾಯವಾಗುವುದು ಖಚಿತ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post