ಕಲ್ಪ ಮೀಡಿಯಾ ಹೌಸ್ | ಸಾಗರ |
ಮನುಷ್ಯ ಇಲ್ಲದೆ ಪ್ರಕೃತಿಯ ಎಲ್ಲ ಜೀವಿಗಳೂ ಬದುಕಬಲ್ಲವು. ಆದರೆ, ಪ್ರಕೃತಿಯಲ್ಲಿನ ಜೀವಿಗಳನ್ನು ಕಳೆದುಕೊಂಡರೆ ನಾವು ಬದುಕಲಾರೆವು. ಜೀವವೈವಿಧ್ಯತೆಯ ಕೊಂಡಿ ಕಳಚಿದಂತೆ ನಮ್ಮ ಆಯುಷ್ಯವೂ ಕ್ಷೀಣಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ನಾಟಿವೈದ್ಯರೂ ಪರಿಸರ ಸಕ್ರಿಯ ಕಾರ್ಯಕರ್ತರೂ ಆದ ಆನೆಗುಳಿ ಸುಬ್ರಾವ್ ಎಚ್ಚರಿಸಿದರು.
ತಾಲ್ಲೂಕು ಎಡಜಿಗಳೆಮನೆ ಗುಬ್ಬಗೋಡಿನಲ್ಲಿ ಡಾ.ಜಿ.ಎ.ನಾರಿಬೋಲಿ ಎಂ.ಡಿ.ಎಪ್ ಶಿಕ್ಷಣ ಮಹಾವಿದ್ಯಾಲಯ ಇವರು ಆಯೋಜಿಸಿದ ಪೌರತ್ವ ತರಬೇತಿ ಶಿಬಿರದಲ್ಲಿ ಪಶ್ಚಿಮಘಟ್ಟದ ಜೀವವೈವಿಧ್ಯದ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಾವು ಪ್ರಕೃತಿಯ ಶಿಶುಗಳು, ನಮ್ಮ ಬದುಕಿನ ಪ್ರತಿ ಹೆಜ್ಜೆ ಯಲ್ಲೂ ಪ್ರಕೃತಿ ನಮ್ಮನ್ನು ಸಲುಹುತ್ತದೆ. ಸ್ವಾರ್ಥ, ಸುಖಲೋಲುಪತೆಯ ಅಪಕ್ವ ಬದುಕನ್ನು ಅರಸುವ ನಮಗೆ ನಾವು ಕಳೆದುಕೊಳ್ಳುತ್ತಿರುವುದೇನು ಎಂಬುದರ ಅರಿವಿಲ್ಲದಿರುವುದು ಖೇದಕರ ಎಂದರು.
Also read: ದೇವಾಲಯದ ರಥದ ಅಡಿಗೆ ಸಿಲುಕಿ ಐದು ವರ್ಷದ ಕಂದಮ್ಮ ದಾರುಣ ಸಾವು
ಜೀವವೈವಿಧ್ಯತೆಯ ಅವಶ್ಯಕತೆ, ಪರಿಸರ ನಾಶಕ್ಕೆ ಕಾರಣಗಳು, ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳು, ಪರಿಸರ ರಕ್ಷಣೆಯ ಸರಳೋಪಾಯಗಳ ಬಗ್ಗೆ ವಿವರಿಸಿದರು.
ಹತ್ತಿರದ ಅರಣ್ಯ ಮಧ್ಯದಲ್ಲೇ ಸಂವಾದ ನಡೆಸಿ ಕೆಲವು ಔಷಧೀಯ ಸಸ್ಯಗಳ ಪರಿಚಯ ಮಾಡಿಕೊಡಲಾಯಿತು. 90ಕ್ಕೂ ಹೆಚ್ಚು ಶಿಭಿರಾರ್ಥಿಗಳಿದ್ದರು. ಡಾ.ಶಿಲ್ಪ ವಿ.ಎನ್. ಪ್ರಾಚಾರ್ಯರು, ಹಾಲೇಶ್ ಶಿಭಿರಾಧಿಕಾರಿಗಳು, ಸಹ ಉಪನ್ಯಾಸಕರುಗಳು, ಗ್ರಾಮಸ್ಥರು, ಜಿ.ಕೆ.ಗಣಪತಿ ಭಾಗವಹಿಸಿದ್ದರು.
ಶ್ರೀ ಸ್ವಾಮಿದತ್ತ ಹೆಚ್.ಎಸ್. ಅಧ್ಯಕ್ಷತೆ ವಹಿಸಿದ್ದರು, ರಘುವೀರ್ ಸೌಮ್ಯ, ಅನುಷ ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post