ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಾಕ್ಷತ್ ಬ್ರಹ್ಮ ದೇವರೇ ಬಂದು ಹೇಳಿದರೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಪುನರುಚ್ಛಾರ ಮಾಡಿದರು.
ಭದ್ರಾವತಿಯ #Bhadravathi ಸಿದ್ದಾರೂಢನಗರದ ಧರ್ಮಶ್ರೀ ಸಭಾಭವನದಲ್ಲಿ ಈಶ್ವರಪ್ಪ ಅಭಿಮಾನಿ ಬಳಗ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಈಗ ಲೋಕಸಭಾ ಚುನಾವಣೆಯಲ್ಲಿ #LoksabhaElection2024 ಪಕ್ಷದ ಕಾಯಕರ್ತರಿಗೆ, ಹಿಂದುಳಿದ ವರ್ಗದವರಿಗೆ ಕುರುಬರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲಾರದೆ, ಅವರಿಗೆ ನ್ಯಾಯ ಕೊಡಿಸಲು ಹಾಗೂ ಪಕ್ಷವನ್ನು ಬಿಎಸ್’ವೈ ಕುಟುಂಬ ರಾಜಕಾಣದಿಂದ ಮುಕ್ತಗೊಳಿಸಿ ಪಕ್ಷವನ್ನು ಶುಚಿಗೊಗೊಳಿಸಲು ನಿರ್ಧರಿಸಿ ಚುನಾವಣಾ ಕಣಕ್ಕೆ ಇಳಿದಿದ್ದೇನೆ ಎಂದರು.
ಈಗಲೂ ಪಕ್ಷದ ವರಿಷ್ಠರು ಈ ಕುರಿತಂತೆ ನನ್ನನ್ನು ಕರೆದು ಮಾತನಾಡಿ ಚರ್ಚಿಸಲು ಕರೆದರೆ, ಅದನ್ನು ನಿಮಗೆ ತಿಳಿಸಿ ಅವರ ಬಳಿ ಹೋಗಿ ಎಲ್ಲಾ ಪ್ರಶ್ನೆಗಳನ್ನು ಮುಂದಿಡುತ್ತೇನೆ. ಅವರು ಏನು ಹೇಳುತ್ತಾರೋ ನೋಡೋಣ ಎಂದರು.
ಬಿಜೆಪಿ ನನ್ನ ತಾಯಿ 35-40 ಆ ಪಕ್ಷದ ಸಿದ್ಧಾಂತಕ್ಕೆ ಕರ್ನಾಟಕ ರಾಜ್ಯದಲ್ಲಿ ಬಿಎಸ್’ವೈ #BSYediyurappa ಕುಟುಂಬ ರಾಜಕಾರಣದಿಂದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಸಲುವಾಗಿ ನಾನು ಈ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತದ್ದೇನೆ ಹೊರತು ಎಂಪಿ, ಎಂಎಲ್’ಎ ಆಗುವ ಆಸೆಯಿಂದ ಅಲ್ಲ ಎಂದರು.
ಈ ಹಿಂದೆ ನಾನು ಪಕ್ಷದ ವರಿಷ್ಠರಾದ ಅಮಿತ್ ಷಾ ಅವರೊಂದಿಗೆ ಕರ್ನಾಟಕ ರಾಜ್ಯದಲ್ಲಿ ಬಿಎಸ್’ವೈ ಮಾಡುತ್ತಿರುವ ಕುಟಂಬ ರಾಜಕಾರಣದ ಬಗ್ಗೆ ಹಾಗೂ ಇಲ್ಲಿನ ಪಕ್ಷದ ಕಾರ್ಯಕರ್ತರ, ನಾಯಕರ ಮನಸ್ಸಿನ ನೋವನ್ನು ಕುರಿತು ಅವರಿಗೆ ತಿಳಿಸಿದ್ದೆ. ಅದರ ಬಗ್ಗೆ ಅವರುಗಳು ಗಮನಹರಿಸಬಹುದೆಂಬ ನಂಬಿಕೆ ಹೊಂದಿದ್ದೆ. ಆದರೆ ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಂಪಿಎಂ, ವಿಐಎಸ್’ಎಲ್ ಕುರಿತಂತೆ ನಾವು ನೀವೆಲ್ಲ ಅಣ್ಣ-ತಮ್ಮಂದಿರಂತೆ. ನಾವೆಲ್ಲಾ ಒಟ್ಟಾಗಿ ಕುಳಿತು ಚರ್ಚಿಸಿ ಮುಂದೆ ಏನು ಮಾಡುಬಹುದೆಂದು ನಿರ್ಧರಿಸೋಣ. ಭದ್ರಾವತಿ ಜನತೆ ನನಗೆ ಅಧಿಕ ಮತ ಹಾಕಿದರೆ ನಾನು ಗೆಲ್ಲುವುದು ಗ್ಯಾರಂಟಿ. ಆ ರೀತಿ ಕ್ಷೇತ್ರದ ಜನತೆ ನನಗೆ ಮತ ಹಾಕಿಯೇ ಹಾಕುತ್ತಾರೆಂಬ ಭರವಸೆ ನನಗಿದೆ ಎಂದರು.
ಕುರುಬ ಸಮಾಜದ ಮುಖಂಡರಾದ ಮಹೇಶ್ ಕುಮಾರ್, ಶಾರದಮ್ಮ, ಬಿಜೆಪಿ ಮಾಜಿ ಅಧ್ಯಕ್ಷ ಪ್ರಭಾಕರ್, ಪ್ರಜಾಪ್ರತಿನಿಧಿ ಸುರೇಶ್, ಎ.ಜಿ. ಮಾರುತಿ, ತ್ಯಾಗರಾಜ್ ಮುಂತಾದವರು ಮಾತನಾಡಿದರು.
ಹಾ. ರಾಮಪ್ಪ, ನಾರಾಯಣಪ್ಪ, ಮಂಜುನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post