ಕಲ್ಪ ಮೀಡಿಯಾ ಹೌಸ್ | ಉಡುಪಿ |
ನನಗೆ ಟಿಕೇಟ್ ನೀಡುವ ವಿಚಾರದಲ್ಲಿ ಬೇರೆ ಪಕ್ಷಕ್ಕೆ ಹೋಗುತ್ತೀರಾ ಎಂದು ಕೇಳಿದ್ದರು. ಆದರೆ, ಬೇರೆ ಪಕ್ಷಕ್ಕೆ ಹೋಗುವುದಿರಲಿ, ನಾನು ಸತ್ತಾಗ ನನ್ನ ಹೆಣದ ಮೇಲೂ ಸಹ ಬಿಜೆಪಿ ಬಾವುಟವೇ ಹಾಕಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಖಡಕ್ ಮಾತುಗಳನ್ನಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ನನ್ನ ತಾಯಿ. ನಾನು ಎಂದಿಗೂ ಪಕ್ಷ ಬಿಟ್ಟು ಹೋಗಿಲ್ಲ, ಮುಂದೂ ಹೋಗುವುದಿಲ್ಲ. ನಾನು ಸತ್ತಾಗ ನನ್ನ ಹೆಣದ ಮೇಲೂ ಸಹ ಬಿಜೆಪಿ ಬಾವುಟವನ್ನು ಹಾಕಬೇಕು. ನಾನು ಅಂತಹ ಪಕ್ಷ ನಿಷ್ಠೆಯ ಕಾರ್ಯಕರ್ತ ಎಂದರು.
ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ಶಾಂತಿ ನಡಿಗೆ ಎಂದು ನಡೆದಿದತ್ತು. ನಕ್ಸಲರು, ಹಿಂದುತ್ವ ವಿರೋಧಿಗಳನ್ನು ಒಳಗೊಂಡ ಅಂದಿನ ಶಾಂತಿ ನಡಿಗೆ ನೇತೃತ್ವನ್ನು ಡಾ.ಧನಂಜಯ ಸರ್ಜಿ ವಹಿಸಿದ್ದರು. ಸರ್ಜಿ ಕಾಂಗ್ರೆಸ್’ಗೆ ಹೋಗುವ ಪ್ರಯತ್ನವನ್ನೂ ಸಹ ಮಾಡಿದ್ದರು. ಆದರೆ, ಈಗ ಪಕ್ಷನಿಷ್ಠೆ ಹೊಂದಿರುವವರನ್ನು ನಿರ್ಲಕ್ಷಿಸಿ, ಸರ್ಜಿಗೆ ಮಣೆ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Also read: ಬಿಜೆಪಿ-ಯಡಿಯೂರಪ್ಪ-ವಿಜಯೇಂದ್ರ ವಿಚಾರದಲ್ಲಿ ನೇರವಾಗಿಯೇ ಈ ಆರೋಪ ಮಾಡುತ್ತೇನೆ | ಈಶ್ವರಪ್ಪ ಹೇಳಿದ್ದೇನು?
ಹಿಂದುತ್ವ, ರಾಷ್ಟ್ರೀಯತೆಯ ಸಿದ್ದಾಂತ ಹಾಗೂ ಪಕ್ಷ ನಿಷ್ಠೆ ಎನ್ನುವುದಕ್ಕೆ ಮತ್ತೊಂದು ಹೆಸರು ರಘುಪತಿ ಭಟ್. ಆದರೆ, ಇಂತಹ ವ್ಯಕ್ತಿಯನ್ನು ತಿರಸ್ಕರಿಸಿ, ಜಾತಿ, ಹಣದ ಆಧಾರದಲ್ಲಿ ಸರ್ಜಿಗೆ ಟಿಕೇಟ್ ನೀಡಿದ್ದಾರೆ. ಹಿಂದುತ್ವವನ್ನು ವಿರೋಧಿಸಿದವರಿಗೆ ಮಣೆ ಹಾಕಿದ್ದಾರೆ. ಇಂತಹ ಹಿಂದುತ್ವವನ್ನು ನೀವು ಒಪ್ಪುತ್ತೀರಾ ಅಥವಾ ಜೀವಮಾನ ಪರ್ಯಂತ ಹಿಂದುತ್ವಕ್ಕಾಗಿ ಹೋರಾಡಿ, ಸಂಘದ ಮಾರ್ಗದರ್ಶನದಲ್ಲಿ ನಡೆದು, ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ ರಘುಪತಿ ಭಟ್ ಅವರನ್ನು ಒಪ್ಪುತ್ತೀರೋ ಎಂದು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post