ಕಲ್ಪ ಮೀಡಿಯಾ ಹೌಸ್ | ತ್ರಿಶೂರ್ |
ಎಂದಿಗೂ ಬಿಜೆಪಿಗೆ ನೆಲೆಯಿಲ್ಲ ಎಂದು ಹೇಳಲಾಗುತ್ತಿದ್ದ ಕೇರಳದಲ್ಲಿ ಕಮಲ ಪಕ್ಷ ಈ ಬಾರಿ ಖಾತೆ ತೆರೆದಿದೆ.
ಹೌದು… ತ್ರಿಶೂಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಚಿತ್ರನಟ ಸುರೇಶ್ ಗೋಪಿ #Suresh Gopi ಗೆಲುವು ಸಾಧಿಸುವ ಮೂಲಕ ಕೇರಳದಲ್ಲಿ ಪಕ್ಷದ ಅಕೌಂಟ್ ಓಪನ್ ಮಾಡಿದ್ದಾರೆ. ಈ ಮೂಲಕ ಕೇರಳದಿಂದ ಆಯ್ಕೆಯಾದ ಮೊದಲ ಬಿಜೆಪಿ ಸಂಸದ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಪ್ರತಿಸ್ಪರ್ಧಿ ಸಿಪಿಐನ ವಿ.ಎಸ್. ಸುನೀಲ್ ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಕೆ. ಮುರಳೀಧರನ್ ಅವರೆದುರು ಸುರೇಶ್ ಗೋಪಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಸಿಪಿಐ ಸ್ಪರ್ಧೆಯು ಬಿಜೆಪಿಯ ಗೆಲುವಿಗೆ ಕಾರಣವಾಯಿತು.
Also read: ಸೊರಬ | ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ | ರಾಘಣ್ಣ ಸಚಿವರಾಗಲಿ ಎಂದ ಅಭಿಮಾನಿಗಳು
ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಸುರೇಶ್ ಗೋಪಿ ಗೆದ್ದಿದ್ದಾರೆ. ಈ ಮೂಲಕ ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅರಳಿದ್ದು, ಬಿಜೆಪಿ ಹೈಕಮಾಂಡ್ ಕನಸು ನನಸಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post