ಕಲ್ಪ ಮೀಡಿಯಾ ಹೌಸ್ | ಸೊರಬ |
ಅಂಕಿಅಂಶಗಳ ಭಂಡಾರ, ಅರ್ಥಶಾಸ್ತ್ರ, ಪರಿಸರ ವಿಶ್ಲೇಷಕ, ಸರಳ ಸಜ್ಜನ ಬಿ.ಎಂ.ಕುಮಾರಸ್ವಾಮಿ ಅವರಿಗೆ 80ರ ಹರೆಯ! ಈಗಲೂ ಪಾದರಸದಂತೆ ಸದಾ ಚಟುವಟಿಕೆಯಲ್ಲಿರುವ ಅವರ ೮೦ ನೇ ವರ್ಷದ ಆಚರಣೆಯನ್ನು ಅಭಿಮಾನಿ, ಶಿಷ್ಯ ಬಳಗ ಅರ್ಥಪೂರ್ಣವಾಗಿ ಇದೇ *ರಂದು ಶಿವಮೊಗ್ಗದಲ್ಲಿ ಆಯೋಜಿಸಿದೆ. ಆಚರಣೆ ಎನ್ನುವುದಕ್ಕಿಂತಲೂ ಒಬ್ಬ ಪ್ರಾಜ್ಞರಿಗೆ, ಅವರ ಯೋಗ್ಯತೆಗೆ ಅನುಸಾರವಾಗಿ ಚಿಂತನಾ ಕಮ್ಮಟದ ಮೂಲಕ ನೀಡುತ್ತಿರುವ ಅರ್ಥಪೂರ್ಣ ಸಮಾರಂಭಕ್ಕೆ ಕರ್ನಾಟಕ ವೃಕ್ಷಲಕ್ಷ ಆಂದೋಲನ ಹಾಗೂ ಸೊರಬ ಪರಿಸರ ಜಾಗೃತಿ ಟ್ರಸ್ಟ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದೆ.
ಇವರ ಒಡನಾಡಿ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತಹೆಗಡೆ ಅಶಿಸರ ಅವರ ಒಡನಾಟವನ್ನು ನೆನಪಿಸಿಕೊಂಡಿದ್ದು ಕೈಗಾ ವಿರೋಧದ ವೇಳೆ ಹೆಚ್ಚು ನಿಕಟವರ್ತಿ ಗಳಾದ ಶ್ರೀಯುತ ಹಲವು ಮುಖಗಳ ಪ್ರತಿಭೆಯುಳ್ಳವರು.ವೃಕ್ಷಲಕ್ಷ ಆಂದೋಲನದ ದೇವರ ಕಾಡು ಉಳಿಸಿ, ಗೋಮಾಳ ಉಳಿಸಿ ಚಳುವಳಿಗಳನ್ನು ಪಶ್ಚಿಮ ಘಟ್ಟದಲ್ಲಿ ರಚನಾತ್ಮಕವಾಗಿ ಪಾರಿಸಾರಿಕ ತಜ್ಞತೆಯೊಂದಿಗೆ ರಚನಾತ್ಮಕ ಜನಾಂದೋಲನವಾಗಿ ರೂಪಿಸಲು ಹಲವು ಗೋಷ್ಠಿಗಳನ್ನು 30 ವರ್ಷಗಳಿಂದ ನಡೆಸುತ್ತಿರುವುದಕ್ಕೆ ಬಿ.ಎಂ.ಕೆ. ಅವರೇ ನಮ್ಮ ಪ್ರೋಪೆಸರ್ ಎಂದು ಸ್ಮರಿಸಿದ್ದಾರೆ.
ತಮ್ಮ ಮೊನಚುಮಾತು, ಅಂಕಿ ಸಂಖ್ಯೆ , ಅಧಿಕಾರಯುತ ಮಾತು, ಹಳ್ಳಿಗರನ್ನು ಹಿಡಿದಿಡುವ ನಿರರ್ಗಳ ವಾಗ್ಮಿ. ಕೇಂದ್ರ ಪರಿಸರ ಕಾಯಿದೆಗೆ ತಿದ್ದುಪಡಿ ತರುವಾಗ, ಅರಣ್ಯ ಕಾಯಿದೆ, ಜೀವವೈವಿಧ್ಯ ಕಾಯಿದೆ ರೂಪಿಸುವಾಗ, ಬೀಜ ಮಸೂದೆ ಒಂದಲ್ಲ, ಎರಡಲ್ಲ,ಸರ್ಕಾರದ ಪರಿಸರ ವಿರೋಧಿ ನೀತಿಗಳಿಗೆ ನಮ್ಮ ವಿರೋಧ ವ್ಯಕ್ತ ಮಾಡುವಾಗ ನಮಗೆ, ಪರಿಸರ ಕಾರ್ಯಕರ್ತರಿಗೆ ತಜ್ಞ ಮಂಡನೆಗೆ ಗೈಡ್ ಬಿ.ಎಂ.ಕೆ. ತಾಲೂಕು ಜಿಲ್ಲಾ ರಾಜಧಾನಿ ಮಟ್ಟದಲ್ಲಿ ಕಳೆದ 25 ವರ್ಷಗಳಲ್ಲಿ ನೂರಾರು ನಿಯೋಗಗಳಲ್ಲಿ ಜೊತೆಗೆ ನಿಂತು ಸ್ಪೂರ್ತಿ ತುಂಬಿದ ಸದಾ ಹಸನ್ಮುಖಿ ಸ್ಥಿತ ಪ್ರಜ್ಞರವರು ಎಂದು ಶ್ಲಾಘಿಸಿದ್ದಾರೆ.
Also read: ಮೋದಿಯವರಿಗೆ ರಾಷ್ಟ್ರಪತಿಗಳು ತಿನ್ನಿಸಿದ್ದು ಏನು? ಇಲ್ಲಿದೆ ಕುತೂಹಲಕಾರಿ ಮಾಹಿತಿ
2017 ರಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆದ ಬೇಡ್ತಿ ಸಮಾವೇಶದಲ್ಲಿ ಪ್ರೋ. ಬಿ.ಎಂ.ಕುಮಾರಸ್ವಾಮಿ ಅವರಿಗೆ ಪರಿಸರ ಪಂಡಿತ ಪ್ರಶಸ್ತಿ ನೀಡಿ ಸನ್ಮಾನ ಮಾಡಿದ ಸಂತಸ ನಮ್ಮೆಲ್ಲರದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಪಜಾ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್, ದೊಡ್ಡವರು ಸಣ್ಣವರು ಎಂಬ ಭೇದವಿಲ್ಲ ಹಳ್ಳಿಗರು, ವನವಾಸಿಗರ ಜೊತೆ ಆತ್ಮೀಯ ಮಾತುಕತೆ. ಅವರು ಭಾಷಣಕ್ಕೆ ನಿಂತಾಗ ಸರ್ಕಾರದ ನಿಸರ್ಗ ವಿರೋಧಿ ನೀತಿಗಳನ್ನು ಖಂಡಿಸುವಾಗ ಪ್ರೊ.ಬಿ.ಎಂ. ಕೆ. ಅವರಿಗೆ 80 ವರ್ಷ ಅಲ್ಲ ಅದು ಅವರ ದೇಹಕ್ಕೆ, ನಮಗೆ ಅವರಿನ್ನು 48 ವಯಸ್ಸಿನವರು ಎಂದೇ ಅನಿಸುತ್ತದೆ. ರಾಗಿಗುಡ್ಡ ಉಳಿಸಿ ಎಂಬ ಚಳುವಳಿಯನ್ನು ಶಿವಮೊಗ್ಗದಲ್ಲಿ ನಡೆಸಲು ಬಿ.ಎಂ.ಕೆ. ಪ್ರಮುಖ ಪಾತ್ರ ವಹಿಸಿದ್ದರು. ಸೊರಬದ ಹಲವು ಪರಿಸರಾತ್ಮಕ ಚಟುವಟಿಕೆಗೆ ಸದಾ ಅವರೆ ಬೆನ್ನೆಲುಬು ಎಂದು ನೆನಪಿಸಿಕೊಂಡಿದ್ದಾರೆ.
ಮಾನ್ಯ ಬಿ.ಎಂ. ಕುಮಾರಸ್ವಾಮಿ ಅವರ ಜೊತೆ ಅವರ ಧರ್ಮಪತ್ನಿ ಪುತ್ರಿಯರು ಎಲ್ಲರಿಗೆ ಆರೋಗ್ಯ ಭಾಗ್ಯ ಸದಾ ಇರಲಿ ಎಂದು ಅನಂತಹೆಗಡೆ ಅಶಿಸರ, ಎಂ.ಆರ್.ಪಾಟೀಲ್ ಸೇರಿದಂತೆ, ವೃಕ್ಷಲಕ್ಷ ಆಂದೋಲನದ ಗಣಪತಿ ಬಿಸಲಕೊಪ್ಪ, ಕೇಶವಕೋರ್ಸೆ, ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ವೀರೇಶಗೌಡ ಇನ್ನೂ ಅನೇಕರು ಆಶಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post