ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತೀಯ ದಂಡ ಸಂಹಿತೆ #Indian Penal Code ಬದಲಾಗಿ ಭಾರತೀಯ ನ್ಯಾಯ ಸಂಹಿತೆ 2023 ಹೊರ ಕಾನೂನು ಜಾರಿಯಾದ ಕೆಲವೇ ಗಂಟೆಗಳಲ್ಲಿ ಇದರ ಅಡಿಯಲ್ಲಿ ಪ್ರಕರಣ ದಾಖಲಾಗಿ, ಎಫ್’ಐಆರ್ ಹಾಕಲಾಗಿದೆ.
ಎಲ್ಲಿ ಮೊದಲ ಕೇಸ್?
ಹೊಸ ಕಾನೂನಿನ ಅಡಿಯಲ್ಲಿ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ಹಾಗೂ ಮೊದಲ ಎಫ್’ಐಆರ್ ದಾಖಲಾಗಿದೆ.
ಹೊಸ ಕಾನೂನಿನ ಅಡಿಯಲ್ಲಿ ಮೊದಲ ಆರೋಪಿಯಾಗಿರುವುದು ಬಿಹಾರದ ಬಹರ್ ನಿವಾಸಿ ಪಂಕಜ್ ಕುಮಾರ್ ಎಂಬಾತನಾಗಿದ್ದಾನೆ.
Also read: ವೈದ್ಯರಲ್ಲಿ ಸೇವೆಯೊಂದಿಗೆ ಪ್ರಾಮಾಣಿಕತೆಯೂ ಸಹ ಮುಖ್ಯ: ಡಾ. ನಂದಕಿಶೋರ ಲಾಹೋಟಿ
ಏನಿದು ಪ್ರಕರಣ?
ಪಂಕಜ್ ಕುಮಾರ್ ಎಂಬಾತ ರೈಲು ನಿಲ್ದಾಣದ ಮುಖ್ಯರಸ್ತೆಯ ಬಳಿ ಎತ್ತಿನಗಾಡಿಯಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದನು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಅಂಗಡಿಯನ್ನು ತೆರವುಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದರೂ ನಿರ್ಲಕ್ಷ್ಯ ತೋರಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತಂತೆ ಎಫ್’ಐಆರ್’ನಲ್ಲಿ ಉಲ್ಲೇಖಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 285ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post