ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೇಂದ್ರ ಬಜೆಟ್ 2024-25ರಲ್ಲಿ #Centra Budget 2024-25 ಹೊಸ ತೆರಿಗೆ ಪದ್ಧತಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ #Income Tax ದರಗಳ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ #Nirmala Sitaraman ದರ ಪರಿಷ್ಕರಣೆ ಮಾಡಿದ್ದು, 3 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿದ್ದಾರೆ.
Also read: ಕೇಂದ್ರ ಬಜೆಟ್ 2024-25 | ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ | ಕಸ್ಟಮ್ಸ್ ಡ್ಯೂಟಿ ಇಳಿಕೆ
ಹೊಸ ತೆರಿಗೆ ಆಡಳಿತ ದರ ಪರಿಷ್ಕರಣೆ ಹೀಗಿದೆ:
- 0-3ಲಕ್ಷ – ನಿಲ್
- 3-7ಲಕ್ಷ – 5%
- 7-10ಲಕ್ಷ -10%
- 10-12ಲಕ್ಷ -15%-20% ಮತ್ತು
- 15 ಲಕ್ಷ – 30%.
ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಈ ಮಿತಿ 2.5 ಲಕ್ಷ ರೂ. ವರೆಗೆ ತೆರಿಗೆ ಇರಲಿಲ್ಲ. 2.5 ರಿಂದ 5 ಲಕ್ಷ ರೂ ಗೆ ಶೇ.5ರಷ್ಟು, 5ರಿಂದ 10ಲಕ್ಷ ರೂ.ವರೆಗೆ ಶೇ.20ರಷ್ಟು ಮತ್ತು 10 ಲಕ್ಷರೂ ಗಿಂತೆ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟು ತೆರಿಗೆ ಇತ್ತು.

ತೆರಿಗೆ ಕಾಯ್ದೆ ಸಮಗ್ರ ಪರಿಶೀಲನೆ
ಇನುನ, ಆದಾಯ ತೆರಿಗೆ ಕಾಯ್ದೆ 1961ನ್ನು ಕೇಂದ್ರ ಸರ್ಕಾರ ಸಮಗ್ರವಾಗಿ ಪರಿಶೀಲನೆ ಮಾಡಲಾಗಿದ್ದು, ಇದು ವಿವಾದ ಹಾಗೂ ವ್ಯಾಜ್ಯಗಳನ್ನು ಕಡಿಮೆ ಮಾಡಲಿದೆ. ಇದನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಸ್ತಾಪಿಸಳಾಗಿದ್ದು, ತೆರಿಗೆ ಪದ್ದತಿ ಮತ್ತಷ್ಟು ಸರಳೀಕರಣಗೊಳ್ಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Discussion about this post