ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #PM Narendra Modi ನೇತೃತ್ವದ ಕೇಂದ್ರ ಸರ್ಕಾರದ ಈ ಅವಧಿಯ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ #Nirmala Sitaraman ಅವರು ಮಂಡಿಸಿದ್ದು, ಹಲವು ವಸ್ತುಗಳ ಮೇಲಿನ ಬೆಲೆ ಇಳಿಕೆ ಮಾಡುವ ಮೂಲಕ ದೇಶವಾಸಿಗಳಿಗೆ ಉಡುಗೊರೆ ನೀಡಿದ್ದಾರೆ.
ಹಲವು ವಸ್ತುಗಳ ಮೇಲಿನ ಸುಂಕದಲ್ಲಿ ಏರಿಳಿತ ಮಾಡಿರುವ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆಯ ಕಾಳಜಿಯ ಭಾಗವಾಗಿ ಪ್ಲಾಸ್ಟಿಕ್ ವಸ್ತುಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿದೆ.
ಇದೇ ವೇಳೆ ಸೌರ ವಿದ್ಯುತ್ ಬಳಕೆಯನ್ನು ಪ್ರೋತ್ಸಾವಹಿಸುವ ಸಲುವಾಗಿ ಅವರುಗಳ ಮೇಲಿನ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.
Also read: ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ ಮೋದಿ ಗುಡ್ ನ್ಯೂಸ್ | ಯಾರಿಗೆಲ್ಲಾ ಪ್ರಯೋಜನ ಸಿಗಲಿದೆ?
ಯಾವೆಲ್ಲಾ ವಸ್ತುಗಳು ಅಗ್ಗ?
ಮೊಬೈಲ್ ಫೋನ್ ಬಿಡಿ ಭಾಗಗಳು
ಮೊಬೈಲ್ ಫೋನ್
ಮೊಬೈಲ್ ಫೋನ್ ಚಾರ್ಜರ್
ಚಿನ್ನ, ಬೆಳ್ಳಿ, ಪ್ಲಾಟಿನಂ ಮೇಲಿನ ಆಮದು ಸುಂಕ ಕಡಿತ, ಬೆಲೆ ಇಳಿಕೆ
ತಾಮ್ರದ ಮೇಲಿನ ತೆರಿಗೆ ಸಹ ಕಡಿತ
ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದೆ
20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ
ಇಕಾಮರ್ಸ್ ಮೇಲಿನ ಟಿಡಿಎಸ್ ಶೇ 1ರಿಂದ ಶೇ 0,1ಕ್ಕೆ ಇಳಿಕೆ
ಸ್ಟಾರ್ಟ್ ಅಪ್ ವ್ಯವಸ್ಥೆ: ಏಂಜೆಲ್ ಟ್ಯಾಕ್ಸ್ ರದ್ದು
ಕ್ಯಾನ್ಸರ್ ಔಷಧದ ಬೆಲೆ ಇಳಿಕೆ
ಸೋಲಾರ್ ಪ್ಯಾನಲ್’ಗಳ ಬೆಲೆ ಇಳಿಕೆ
ವಿದ್ಯುತ್ ತಂತಿ ಎಕ್ಸ್ ರೇ ಉಪಕರಣಗಳು
ಯಾವೆಲ್ಲಾ ವಸ್ತುಗಳು ದುಬಾರಿ?
ಮೊಬೈಲ್ ಟವರ್ ಬಿಡಿ ಭಾಗಗಳು
ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳು
ಮರು ಬಳಕೆ ಆಗದ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಳು
ವಿವಿಧ ರೀತಿಯ ಬಟ್ಟೆ, ವಸ್ತçಗಳ ಬೆಲೆ ಏರಿಕೆ
ಸ್ಟೇಟ್ ಸ್ಟಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















