ಕಲ್ಪ ಮೀಡಿಯಾ ಹೌಸ್ | ಉಡುಪಿ |
ಜ್ಞಾನ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಉಡುಪಿ ಶ್ರೀ ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಮಹಾ ಸ್ವಾಮೀಜಿ #Shri Vidyesha Thirtha Mahaswamyji of Bandakeri Mutt ಹೇಳಿದರು.
ಅವರು ಉಡುಪಿಯ ರಥಬೀದಿಯಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ 45ನೇ ಚಾತುರ್ಮಾಸ ವ್ರತದ ಸಂಕಲ್ಪವನ್ನು ಗುರುವಾರ ಬೆಳಗ್ಗೆ ಕೈಗೊಂಡು ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಬರುವ ಚಾತುರ್ಮಾಸ್ಯ ವ್ರತ ವನ್ನು ಧಾರಣೆ ಮಾಡುವುದು, ಲೋಕದ ಹಿತಕ್ಕಾಗಿ ಒಂದೆಡೆ ಕುಳಿತು ಅನನ್ಯವಾಗಿ ಭಗವಂತನನ್ನು ಆರಾಧಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಧರ್ಮ , ದೇಶ ಮತ್ತು ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ನಾವು ಮಾಡಲೇಬೇಕಾದಂತಹ ಸತ್ಕಾರ್ಯಗಳನ್ನು ಚಾಚೂ ತಪ್ಪದೆ (ಭಗವಾನ್ ಶ್ರೀ ವೇದವ್ಯಾಸರ ಸಂಪ್ರೀತಿಗಾಗಿ ) ನೆರವೇರಿಸಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ ಎಂದರು.

Also read: ವನ್ಯಜೀವಿ ವಿಭಾಗದ ಮಂಚೂಣಿ ಸಿಬ್ಬಂದಿಗೆ ವಿಶೇಷ ಭತ್ಯೆ ಮಂಜೂರು: ಈಶ್ವರ ಖಂಡ್ರೆ
ಶ್ರೀ ಜಯತೀರ್ಥರ ಆರಾಧನೆ:
ಇದೇ ಸಂದರ್ಭದಲ್ಲಿ ಗುರುವಾರ ಮಳಖೇಡ ಶ್ರೀ ಜಯತೀರ್ಥರ (ಟೀಕಾರಾಯರ) ಆರಾಧನಾ ಮಹೋತ್ಸವವನ್ನು ಗುರುಗಳು ನೆರವೇರಿಸಿದರ. , “ಜ್ಞಾನ ಪ್ರಪಂಚಕ್ಕೆ ಜಯತೀರ್ಥರ ಕೊಡುಗೆ ಅಪಾರ “ಎಂದು ಹೇಳಿದರು.

ರಾಜರ ಮನೆತನದಲ್ಲಿ ಜನಿಸಿದ ರಘುನಾಥ ಎಂಬ ಯುವಕನಿಗೆ ಶ್ರೀ ಅಕ್ಶೋಭ್ಯ ತೀರ್ಥರು ಸನ್ಯಾಸ ದೀಕ್ಷೆಯನ್ನು ಕೊಟ್ಟು ಶ್ರೀ ಜಯತೀರ್ಥ ಎಂದು ನಾಮಕರಣ ಮಾಡಿದರು . ಜಯ ಎಂದರೆ ಮಹಾಭಾರತ ಎಂಬ ಅರ್ಥವಿದೆ . ಸಂಸಾರವೆಂಬ ದೊಡ್ಡ ಶತ್ರುವನ್ನು ಸಂಹಾರ ಮಾಡುವ, ಪರಮ ಆನಂದ ನೀಡುವ, ಇಹ- ಪರ ಲೋಕದಲ್ಲೂ ಸಂತೋಷ ತಂದುಕೊಡುವ ಶಾಸ್ತ್ರ ಗ್ರಂಥಗಳನ್ನು ರಚಿಸಿ ಅದರ ಮೇಲೆ “ಜಯ” ಸಾಧಿಸಿದವರು ಜಯತೀರ್ಥರು. ಹಾಗಾಗಿ ಜಯ ತೀರ್ಥ ಎಂಬ ನಾಮಧೇಯ ಅವರಿಗೆ ಅನ್ವರ್ಥವಾಗಿದೆ ಎಂದು ಸ್ವಾಮೀಜಿ ಹೇಳಿದರು.

ಉಡುಪಿಯ ಪರ್ಯಾಯ ಪೀಠದಲ್ಲಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಅಭಿಮಾನ ಮತ್ತು ವಿಶ್ವಾಸದ ಆಮಂತ್ರಣಕ್ಕೆ
ಗೌರವ ನೀಡಿ, ತಾವು ಉಡುಪಿಯಲ್ಲಿ 45ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದು, ಭಕ್ತರು ಧರ್ಮಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಸಹಕಾರವನ್ನು ನೀಡುವ ಮೂಲಕ ಧನ್ಯತೆಯನ್ನು ಸಮರ್ಪಿಸಬೇಕು ಎಂದು ಸ್ವಾಮೀಜಿ ನುಡಿದರು.
ಇದೇ ಸಂದರ್ಭದಲ್ಲಿ ಶ್ರೀ ಸೀತಾ ಲಕ್ಷ್ಮಣ ಸಮೇತ ಶ್ರೀ ಕೋದಂಡ ರಾಮದೇವರ ಮೂರ್ತಿಗಳಿಗೆ ಹಾಗೂ ಸಂಸ್ಥಾನದ ಎಲ್ಲಾ ಪ್ರತಿಮೆಗಳಿಗೆ ಸ್ವಾಮೀಜಿ ಮಹಾಪೂಜೆಯನ್ನು ನೆರವೇರಿಸಿದರು. ಶ್ರೀಮಠದ ಭಕ್ತರು ಇದಕ್ಕೆ ಸಾಕ್ಷಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post