ಕಲ್ಪ ಮೀಡಿಯಾ ಹೌಸ್ | ವಯನಾಡ್ |
ಕೇಳರದ ವಯನಾಡಿನಲ್ಲಿ #Wayanad ಸಂಭವಿಸಿದ ಭೀಕರ ಭೂಕುಸಿತದಲ್ಲಿ #Landslide ಸಾವಿಗೀಡಾದವರ ಸಂಖ್ಯೆ 158ಕ್ಕೆ ಏರಿಕೆಯಾಗಿದ್ದು, 211 ಮಂದಿ ನಾಪತ್ತೆಯಾಗಿದ್ದಾರೆ.
ಘಟನೆಯಲ್ಲಿ ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ನಿನ್ನೆ ಮಂಗಳವಾರ ನಸುಕಿನ ಜಾವ ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಭಾರಿ ಭೂಕುಸಿತ ಸಂಭವಿಸಿತು.
Also read: 21ರ ಮೊಮ್ಮಗಳಿಗೆ 65ರ ಅಜ್ಜಿ ಕಿಡ್ನಿ ದಾನ | ಸರ್ಜರಿಯಲ್ಲಿ ಎನ್’ಯು ಆಸ್ಪತ್ರೆ ಅಪೂರ್ವ ಸಾಧನೆ
ನೂರಾರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಉಳಿದಿರುವವರ ರಕ್ಷಣೆಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಇಂದು ಪುನರಾರಂಭಿಸಿವೆ. ಕಗ್ಗತ್ತಲು ಹಾಗೂ ಹವಾಮಾನ ವೈಫರೀತ್ಯದಿಂದಾಗಿ ಮಂಗಳವಾರ ತಡರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ನೂರಾರು ಮನೆಗಳು ಮತ್ತು ಅನೇಕ ಕಡೆಯಲ್ಲಿ ಇಡೀ ಕುಟುಂಬ ಸದಸ್ಯರೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಲವಾರು ಮನೆಗಳು ಧ್ವಂಸಗೊಂಡವು, ಜಲಮೂಲಗಳು ತುಂಬಿ ತುಳುಕುತ್ತಿವೆ. ಮರಗಳು ಬೇರು ಸಮೇತ ಬಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಸಂತ್ರಸ್ತರಿಗೆ ನಿರ್ಣಾಯಕ ನೆರವು ನೀಡಲು ಹಲವಾರು ರಕ್ಷಣಾ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಸೇನೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಭೂಕುಸಿತದಿಂದ ಬದುಕುಳಿದವರಿಗಾಗಿ ಕುಸಿದ ಮೇಲ್ಛಾವಣಿ ಮತ್ತು ಅವಶೇಷಗಳಡಿಯಲ್ಲಿ ಹುಡುಕುತ್ತಿದ್ದಾರೆ.
ದುರಂತದ ಬೆನ್ನಲ್ಲೇ ವಯನಾಸ್, ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಸ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯೊಂದಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post