ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಹತ್ತಿರದ ಚಿಕ್ಕಜಂಬೂರು ಗ್ರಾಮದ ನಿವಾಸಿ ಮೊಹಮ್ಮದ್ ಅಲಿಖಾನ್ ಫಾರ್ಮ್ ಹೌಸನಲ್ಲಿದ್ದ 4 ಹಸುಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಓರ್ವನನ್ನು ಬಂಧಿಸಿ, ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಾವೇರಿ ಜಿಲ್ಲೆ ಹಿರೆಕೆರೂರು ತಾಲ್ಲೂಕು ಆರಿಕಟ್ಟೆ ಗ್ರಾಮದ ಕುಮಾರ್ ಎಂಬುವರನ್ನು ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಕುಮಾರ್ ನೇತೃತ್ವ ತಂಡ ಬಂಧಿಸಿ,ಅಂದಾಜು ರೂ 2,40,000 ಮೌಲ್ಯದ ಹಸುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 9 ನೇ ತಾರೀಖು ದಂದು ಕಾಲುವಾಗಿದ್ದ ಈ ಹಸುಗಳನ್ನು ಚಾಕಚಕ್ಯತೆ ಮತ್ತು ಬುದ್ದಿವಂತಿಗೆಯಿಂದ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಸಬ್ ಇನ್ಸಪೆಕ್ಟರ್ ಪುಷ್ಪಾ, ಸಿಬ್ಬಂದಿಗಳಾದ ಎಚ್.ಸಿ. ಸಂತೋಷ್, ಟೀಕಪ್ಪ, ಪಿಸಿ ಸಲ್ಮಾನ್, ಕಾರ್ತಿಕ್, ಅಶೋಕ ಮತ್ತು ಪ್ರೇಮಾ ಬಾಯಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















