ಕಲ್ಪ ಮೀಡಿಯಾ ಹೌಸ್ | ಸೊರಬ |
ಲಯನ್ಸ್ ಸಂಸ್ಥೆ ಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದು, ಮಾನವನ ಸ್ವಾಸ್ಥ್ಯ ಬದುಕಿಗೆ ಪೂರಕವಾದ ಪರಿಸರ ಸಂರಕ್ಷಣೆಯಲ್ಲಿಯೂ ಹೆಚ್ಚಿನ ಗಮನಹರಿಸುತ್ತಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಭುವನೇಶ್ವರ ಗೌಡ ಹೇಳಿದರು.
ತಾಲ್ಲೂಕು ದೂಗೂರು ಗ್ರಾಪಂ ವ್ಯಾಪ್ತಿಯ ಬರಿಗೆ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರ, ವೃಕ್ಷಲಕ್ಷ ಆಂದೋಲನ ಹಾಗೂ ಪರ್ಯಾವರಣ ಸಂರಕ್ಷಣಾ ಬಳಗದ ವತಿಯಿಂದ ನವಗ್ರಹ ವನ ನಿರ್ಮಾಣ ಹಾಗೂ ವೃಕ್ಷ ರಕ್ಷಾಬಂಧನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೂರ್ವಿಜರು ದೇವರ ಹೆಸರಲ್ಲಿ ಉಳಿಸಿದ ಅರಣ್ಯ, ವನ, ಕೆರೆಕೊಳಗಳು ಸರ್ವೋಪಯೋಗಿ, ಅವುಗಳನ್ನು ಉಳಿಸಿ ಬೆಳೆಸುವ ಆದ್ಯ ಕರ್ತವ್ಯ ನಮ್ಮೆಲ್ಲರದು. ಈ ನಿಟ್ಟಿನಲ್ಲಿ ತಾಲ್ಲೂಕಿನ ಹಲವೆಡೆ ಬೇರೆ ಬೇರೆ ವನ ನಿರ್ಮಾಣ, ಸುಸ್ಥಿರ ಕೃಷಿಕರಿಗೆ ಸನ್ಮಾನ ಮುಂತಾದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಸಮಾಜಮುಖಿ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
Also read: ಕೃಷಿ ಚಟುವಟಿಕೆಗಳ ನಡುವೆ ಜೈವಿಕ ಇಂಧನದ ಪೂರಕ ಗಿಡಗಳ ಪೋಷಣೆ ಅಗತ್ಯ
ಪರ್ಯಾವರಣದ ಶ್ರೀಪಾದ ಬಿಚ್ಚುಗತ್ತಿ ಪ್ರಾಚೀನ ವನಕಲ್ಪನೆ, ವನ ರಕ್ಷಣೆಯ ಪರಿಕಲ್ಪನೆಯನ್ನು ತಿಳಿಸಿ ಇತಿಹಾಸದಲ್ಲಿ ವೃಕ್ಷಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ಅಮೃತಾದೇವಿ, ಅವರ ಹೆಸರಲ್ಲಿ ವನ ನಿರ್ಮಾಣ ಪ್ರಸ್ತುತದ ಕಾಲಘಟ್ಟದಲ್ಲಿ ಅತ್ಯವಶ್ಯ ಎಂದರು.
ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಂ.ಪ್ರಶಾಂತ್ ಪ್ರಾಸ್ತಾವಿಕ ಮಾತನಾಡಿ, ಜನಸಮುದಾಯ ಸಮಾಜಮುಖಿ ಚಿಂತನೆಯತ್ತ ತುಸು ಮುಖ ಮಾಡಿದರೆ ಮುಂದಿನ ಪೀಳಿಗೆಗೆ ಸ್ವಚ್ಛಗಾಳಿ, ನೀರು, ಆಹಾರ ಉಳಿಸಿಕೊಡುವುದು ಕಷ್ಟದ ಕೆಲಸವೇನಲ್ಲ, ಸಂಸ್ಥೆಯ ಜೊತೆಗೆ ಕೈಜೋಡಿಸಿ ಸಹಕರಿಸಿ ಎಂದು ವಿನಂತಿಸಿದರು.
ಉಳವಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್ ವಿ, ಗುರುನಾಥ್, ಬಿ.ಹರೀಶ್, ಕೆಎಸ್.ಪ್ರಸನ್ನ, ಎಂಸಿ.ರಾಜಶೇಖರ ಗೌಡ, ಬರಿಗೆ ರಾಮೇಶ್ವರ ದೇವಸ್ಥಾನ ಟೃಸ್ಟ್ ಅಧ್ಯಕ್ಷ ಬಿ.ಎನ್.ಸಿ.ರಾವ್, ಪ್ರಧಾನ ಕಾರ್ಯದರ್ಶಿ ಸಂದೇಶ್ ಎಸ್, ದೇವಿಪ್ರಸಾದ್ ಬಿ.ಎಮ್, ವಿನಾಯಕ.ಬಿ.ಎಸ್, ಶಿವರಾಂ ಕಂಚಿ, ಅಮ್ರತ್.ಸಿ.ರಾವ್, ಬಿ.ವಿ.ಜಯಂತ್ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post