ಕಲ್ಪ ಮೀಡಿಯಾ ಹೌಸ್ | ಕೂಡಲಿ(ಶಿವಮೊಗ್ಗ) |
ತಿರುಪತಿ #Tirupati ಶ್ರೀ ವೆಂಕಟೇಶ್ವರ ದೇವರ ಲಡ್ಡು ಪ್ರಸಾದದ ವಿಚಾರದಲ್ಲಿ ಉಂಟಾಗಿರುವ ವಿವಾದ ಹಾಗೂ ಅಪಪ್ರಚಾರದ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಕೂಡಲಿ #Kudali ಶೃಂಗೇರಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಅವರು ಇಂದಿನಿಂದ ಉಪವಾಸ ಹಾಗೂ ಮೌನವ್ರತ #MaunaVrata ಕೈಗೊಂಡಿದ್ದಾರೆ.
ಈ ಕುರಿತಂತೆ ಶ್ರೀಮಠದಿಂದ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಲಡ್ಡು ಪ್ರಸಾದ ವಿಚಾರದಲ್ಲಿ ಅಪಪ್ರಚಾರವಾಗಿದೆ. ಇದರ ಪ್ರಾಯಶ್ಚಿತ್ತ, ದುಷ್ಟದಮನ ಮತ್ತು ಆಧ್ಯಾತ್ಮಿಕ ಶಕ್ತಿವರ್ಧನೆಗಾಗಿ ಶ್ರೀಗಳು ಉಪವಾಸ ಮತ್ತು ಮೌನವ್ರತ ಕೈಗೊಂಡಿದ್ದು, ಮೂರು ದಿನ ವ್ರತದಲ್ಲಿ ಇರಲಿದ್ದಾರೆ.
ಇನ್ನು, ತಿರುಪತಿಯಲ್ಲಿ ನಡೆದಿರುವುದು ಸಸ್ಯಾಹಾರ, ಮಾಂಸಹಾರ ಎಂಬ ಚರ್ಚೆ ಮಾಡುವಂತಹ ಸಾಮಾನ್ಯ ಘಟನೆಯಲ್ಲ. ಅಲ್ಲಿ ನಡೆದಿರುವುದು ನಂಬಿಕೆ ದ್ರೋಹ. ಹಿಂದೂ ಸಮಾಜದ ಒಟ್ಟಾರೆ ಬಲಹೀನತೆ ಮೇಲೆ ದುರುಳರು ಮಾಡರುವ ಅಟ್ಟಹಾಸ ಎಂದು ಶ್ರೀಮಠ ತಿಳಿಸಿದೆ.
ದೇವಸ್ಥಾನಗಳ ಮೇಲೆ ಸರ್ಕಾರದ ಹಿಡಿತ ಹಿಂತೆಗೆದುಕೊಳ್ಳಬೇಕು ಎಂದು ಸಮಾಜ ಸರ್ಕಾರವನ್ನು ಒತ್ತಾಯಿಸಬೇಕು. ಅಲ್ಲದೆ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಹಾಗಾಗಿ ಎಲ್ಲರು ತಮ್ಮ ಮನೆಯಲ್ಲಿಯೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Also read: ವಾಲಿಬಾಲ್ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ತಂಡ ಸತತ ಎರಡನೇ ಬಾರಿಗೆ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ
Discussion about this post