ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಪ್ರಸಿದ್ಧ ಕ್ಷೇತ್ರದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಶೀಘ್ರ ದುರಸ್ಥಿ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದೇವಾಲಯ ಶಿಥಿಲಾವಸ್ಥೆಯಲ್ಲಿರುವುದರಿಂದ ನೊಂದ ಭಕ್ತರ ಬಳಗದ ವತಿಯಿಂದ ಇಂದು ತಹಶೀಲ್ದಾರ್ ಹಾಗೂ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
13ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ಸದ್ಯ ಮುಜರಾಯಿ ಹಾಗೂ ಪುರಾತತ್ವ ಇಲಾಖೆಗೆ ಒಳಪಟ್ಟಿದೆ. ಪ್ರತಿನಿತ್ಯ ನೂರಾರು ಭಕ್ತರು, ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಭದ್ರಾವತಿ ಅಂದರೆ ವಿಐಎಸ್’ಎಲ್ ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ನಗರಕ್ಕೆ ಎರಡು ಕಣ್ಣುಗಳಿದ್ದಂತೆ. ಇಂತಹ ದೇವಾಲಯ ಇಂದು ಶಿಥಿಲಾವಸ್ಥೆ ತಲುಪುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದಿದ್ದಾರೆ.
Also read: ಗಮನಿಸಿ! ಅ.26ರಂದು ಭದ್ರಾವತಿಯ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ
ಕಳೆದ ನಾಲ್ಕು ವರ್ಷಗಳಿಂದ ಮಳೆ ಬಂದಾಗ ದೇವಾಲಯದಲ್ಲಿ ಗರ್ಭಗುಡಿಯಾದಿಯಾಗಿ ಸೋರಿಕೆಯಾಗುತ್ತಿದೆ. ದೇವಾಲಯದಲ್ಲಿನ ವಿದ್ಯುತ್ ಸಂಪರ್ಕ ದುರಸ್ಥಿಯಾಗಬೇಕಿದ್ದು, ಇದರಿಂದ ಭಕ್ತರಿಗೆ ಹಾಗೂ ನಿತ್ಯ ಪೂಜಾ ಕಾರ್ಯಕ್ರಮಕ್ಕೆ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಈ ವಿಚಾರವಾಗಿ ಹಿಂದೆ ಸಾಕಷ್ಟು ಬಾರಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಅಲ್ಲದೇ, ದೇವಾಲಯವನ್ನು ಮರುಜೋಡಣೆ ಮುಖಾಂತರ ದುರಸ್ತಿಗೊಳಿಸಿ ಕಾಪಾಡುವ ಕುರಿತಾಗಿಯೂ ಭರವಸೆಗಳು ದೊರೆತಿದ್ದವು. ಆದರೆ, ಈವರೆಗೂ ಯಾವುದೇ ರೀತಿಯಿಂದಲೂ ಕ್ರಮ ಕೈಗೊಂಡಿ, ದುರಸ್ಥಿ ಕಾರ್ಯ ಆರಂಭವಾಗಿಲ್ಲ ಎಂದಿದ್ದಾರೆ.
ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರತಿಷ್ಠಿತವಾಗಿರುವ ಈ ಐತಿಹಾಸಿಕ ದೇವಾಲಯವನ್ನು ಶೀಘ್ರ ದುರಸ್ಥಿಗೊಳಿಸಿ, ಭವಿಷ್ಯದಲ್ಲಿ ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮೂಲಕ, ಜಿಲ್ಲಾಧಿಕಾರಿಗಳು ಹಾಗೂ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post