ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ರಾಷ್ಟ್ರೀಕೃತ ಬ್ಯಾಂಕ್ ಹೆಸರಿನಲ್ಲಿ ಮೊಬೈಲ್’ಗೆ ಬಂದ ಲಿಂಕ್ #Mobile Link ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ನೆಹರೂ ಕಾಲೋನಿಯ ವ್ಯಾಪಾರಿಯೊಬ್ಬರು ಅನ್ ಲೈನ್ ವಂಚಕರ ಜಾಲಕ್ಕೆ ಸಿಲುಕಿ 34.61 ಲಕ್ಷ ಕಳೆದುಕೊಂಡಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್’ನಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಾಪಾರಿ ಮೊಬೈಲ್’ಗೆ ಬ್ಯಾಂಕ್ ಹೆಸರು ಇರುವ ಡಾಟ್ ಎಪಿಕೆ ಎಂಬ ಫೈಲ್ ಲಿಂಕ್ ಬಂದಿದೆ. ಬ್ಯಾಂಕ್ ಹೆಸರು ಇದ್ದುದರಿಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ.
Also read: ದಾವಣಗೆರೆ | ವಿಮಾ ಹಣಕ್ಕಾಗಿ ಸಂಬಂಧಿ ಹತ್ಯೆ | ಘಟನೆ ನಡೆದು 24 ಗಂಟೆಯೊಳಗೇ ಆರೋಪಿಗಳು ಅಂದರ್
ಆಗ ವಂಚಕರು ಅವರ ಖಾತೆಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಿದ್ದಾರೆ. ವ್ಯಾಪಾರಕ್ಕಾಗಿ ಸಾಲ ಮಾಡಿದ್ದ ಅವರು ಉಳಿತಾಯ ಖಾತೆಯಲ್ಲಿ ಆ ಹಣ ಇಟ್ಟುಕೊಂಡಿದ್ದರು.
ಖಾತೆಯಿಂದ ಮೊದಲು 3,61,469 ರೂ. ಮತ್ತು ನಂತರ 74,000 ರೂ. ಮೊತ್ತ ಕಡಿತಗೊಂಡಿದೆ. ಈ ಕುರಿತು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post