ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ‘ಪೃಥ್ವಿ’ #Police Dog Prithvi ಎಂಬ ಹೆಸರಿನ ಶ್ವಾನವು 10 ವರ್ಷ 7 ತಿಂಗಳು ಸೇವೆಯನ್ನು ನಿರ್ವಹಿಸಿ ನಿವೃತ್ತಿ ಹೊಂದಿದ್ದು. ಶ್ವಾನದ ನಿವೃತ್ತಿ ಸಮಾರಂಭವನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆಸಿ ಪೊಲೀಸ್ ಅಧೀಕ್ಷಕರು ಶ್ವಾನ ಮತ್ತು ಶ್ವಾನದ ಹ್ಯಾಂಡ್ಲರ್ ಗಳಿಗೆ ಸನ್ಮಾನಿಸಿದರು.
ಪೃಥ್ವಿ ಶ್ವಾನವು ದಿನಾಂಕ 02.01.2014 ರಂದು ಜನಿಸಿ, ದಿನಾಂಕ 04.03.2014 ರಲ್ಲಿ ಪೊಲೀಸ್ ಶ್ವಾನದಳಕ್ಕೆ ಸ್ಪೋಟಕ ಪತ್ತೆ ಶ್ವಾನವಾಗಿ ಸೇರಿ, ತನ್ನ ಸೇವಾವಧಿಯಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಸ್ಪೋಟಕ ಪತ್ತೆ ಕಾರ್ಯವನ್ನು ನಿರ್ವಹಿಸಿದ್ದು, ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ ಕಂಚಿನ ಪದಕ ಪಡೆದು, ವಿವಿಧ ಡಾಗ್ ಶೋ ಗಳಲ್ಲಿ ಭಾಗವಹಿಸಿರುತ್ತದೆ.
Also read: ಯೂಟ್ಯೂಬ್ ನಿಂದ ಕೋಟಿಗಟ್ಟಲೆ ಹಣ ಸಂಪಾದಿಸಿದ ಮಹಿಳೆಯ ಯಶೋಗಾಥೆ!
ಪೃಥ್ವಿ ಶ್ವಾನದ ಹ್ಯಾಂಡ್ಲರ್ ಗಳಾದ AHC ಲೋಕೇಶಪ್ಪ ವಿ ಕೆ ಮತ್ತು APC ದಿನೇಶ ವಿ ರವರಿಗೆ ಡಾ. ವಿಕ್ರಮ ಅಮಟೆ, IPS., ಪೊಲೀಸ್ ಅಧೀಕ್ಷಕರು ನಿವೃತ್ತಿ ಸಮಾರಂಭದಲ್ಲಿ ಪ್ರಶಂಸನಾ ಪತ್ರಗಳನ್ನು ನೀಡಿರುತ್ತಾರೆ.
ಶ್ವಾನದ ಹ್ಯಾಂಡ್ಲರ್ ದಿನೇಶ ವಿ ರವರ ಒಪ್ಪಿಗೆ ಮೇರೆಗೆ ಪೃಥ್ವಿ ಶ್ವಾನವನ್ನು ಮುಂದಿನ ನಿರ್ವಹಣೆಗಾಗಿ ಅವರಿಗೆ ಒಪ್ಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post