ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಆಧುನಿಕ ಯುಗದಲ್ಲಿ ಮಕ್ಕಳು ಆತ್ಮವಿಶ್ವಾಸದಿಂದ ಸಕ್ರಿಯವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಯಶಸ್ಸು ಕಂಡಾಗ ಭಾರತದ ಯುವ ಸಂಪತ್ತು ಹೆಚ್ಚಿಸಲು ಸಾಧ್ಯ ಎಂದು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಎಂ. ವೀರೇಂದ್ರ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಭಾರತದ ಪ್ರಥಮ ಪ್ರಧಾನ ಮಂತ್ರಿ ಆದ ಪಂಡಿತ್ ಜವರಲಾಲ್ ನೆಹರು “ಆಧುನಿಕ ಭಾರತದ ಶಿಲ್ಪಿ” ಜಗತ್ತು ಕಂಡ ಧೀಮಂತ ರಾಜಕಾರಣಿಗಳಲ್ಲಿ ಒಬ್ಬರು, ನೆಹರು ರವರ ಪ್ರಕಾರ ಮಕ್ಕಳೆಂದರೆ ಭವಿಷ್ಯದ ರೂವಾರಿಗಳು, ಸಾಹಸಿಗರು, ವಿಜ್ಞಾನಿಗಳು, ಮತ್ತು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢತೆ ಪಡೆದು ಭಾರತದ ಸಂಪತ್ತಾಗಿ ಪರಿಣಮಿಸಿ, ನೆಹರುರಂತೆ “ಶಿಸ್ತಿನ” ಸಿಪಾಯಿಯಾಗಿ ಸಮಾಜದಲ್ಲಿ ಉತ್ತಮ ನಾಗರಿಕ ವ್ಯಕ್ತಿತ್ವ ರೂಡಿಸಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿದರು.
Also read: ರಸ್ತೆ ಗುಂಡಿಗಳಿಗೆ ನಾವೀನ್ಯತೆಯ ಕಾಯಕಲ್ಪ | ಜೆಎನ್‌ಎನ್‌ಸಿಇ ಸಿವಿಲ್ ವಿಭಾಗದಿಂದ ನೂತನ ಆವಿಷ್ಕಾರ
ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಕನ್ನಡ ಉಪನ್ಯಾಸಕರಾದ ಶಿವರಾಜ್ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಭಾರತದಲ್ಲಿ ಅಪೌಷ್ಟಿಕತೆಯಿಂದ ಕುಂಠಿತಗೊಂಡ ಮಕ್ಕಳನ್ನು ತಡೆಗಟ್ಟುವ ಉದ್ದೇಶದಿಂದ ಉಚಿತ ಪ್ರಾಥಮಿಕ ಶಿಕ್ಷಣ ಮತ್ತು ಉಚಿತ ಆಹಾರ ಮತ್ತು ಹಾಲು ನೀಡುವ ಉದ್ದೇಶದಿಂದ ಐದು ವರ್ಷಗಳ ಪಂಚವಾರ್ಷಿಕ ಯೋಜನೆಯ ಜೊತೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಮಕ್ಕಳ ದಿನಾಚರಣೆಯನ್ನು ಬೋಧಕ, ಬೋಧಕೇತರರು ಭಾಗವಹಿಸಿ ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಕುಮಾರಸ್ವಾಮಿ ಸ್ವಾಗತಿಸಿ, ಯೋಗರಾಜ್ ವಂದಿಸಿ, ಪರ್ವೇಜ್ ಅಹ್ಮದ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post