ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮಸೀದಿ #Sambhal Mosque ಸರ್ವೇ ನಡೆಯುತ್ತಿರುವಾಗ ಸಮಾಜವಾದಿ ಪಾರ್ಟಿ ಅಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಅಯೋಧ್ಯೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಸಂಭಾಲ್ ನಲ್ಲಿ ಮಸೀದಿ ವಿವಾದ ಹಿಂಸಾಚಾರಕ್ಕೆ ತಿರುಗಿದ್ದು ದೌರ್ಭಾಗ್ಯ ಎಂದು ವಿಷಾದಿಸಿದರು.
ಅಧಿಕಾರಿಗಳು ಸರ್ವೇಗೆ ಹೋದ ವೇಳೆ ಗಲಭೆ ನಡೆಸೋ ಅವಶ್ಯಕತೆ ಇರಲಿಲ್ಲ. ಅಲ್ಲಿನವರು ಸೌಹಾರ್ದದಿಂದ ವರ್ತಿಸಬೇಕಿತ್ತು ಎಂದು ಸಚಿವರು ಹೇಳಿದರು.
ಸರ್ವೇ ನಡೆಯುವಾಗ ಹಿಂಸಾಚಾರ ನಡೆಸಿದ್ದು ದೌರ್ಭಾಗ್ಯವೇ ಸರಿ. ಅಲ್ಲಿನವರು ಗಲಭೆ ಹಂತಕ್ಕೆ ಇಳಿಯಬಾರದಿತ್ತು ಎಂದು ಆಕ್ಷೇಪಿಸಿದರು.
Also read: ಕನ್ನಡ ಪ್ರತಿಯೊಬ್ಬ ಕನ್ನಡಿಗನ ಉಸಿರು: ಡಾ. ಜ್ಞಾನೇಶ್ ಅಭಿಪ್ರಾಯ
ಸಿವಿಲ್ ಕೋರ್ಟ್, ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸಲಾಗುತ್ತಿದೆ. ಆದರೆ, ಇದರಲ್ಲಿ ಸಮಾಜವಾದಿ ಪಾರ್ಟಿ ಜಾತಿ ರಾಜಕಾರಣ ಮಾಡುತ್ತಿದ್ದು, ಇದು ಸರಿಯಲ್ಲ ಎಂದು ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೆಲ್ಲಾ ಎಸ್ಪಿ ಸೋತ ಹತಾಶೆಯ ಪರಿಣಾಮ: ಸಮಾಜವಾದಿ ಪಾರ್ಟಿ ಚುನಾವಣೆಯಲ್ಲಿ ಸೋತ ಹತಾಶೆಯ ಕಾರಣದಿಂದ ಈ ರೀತಿ ಕೋಮುವಾದಿ ರಾಜಕಾರಣ ಮಾಡುತ್ತಿದೆ. ಇದು ಸರಿಯಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಖಂಡಿಸಿದರು.
ದೇಶದಲ್ಲಿ ಪ್ರತಿಯೊಬ್ಬರೂ ಈ ನೆಲದ ಕಾನೂನುಗಳಿಗೆ ಬದ್ಧರಾಗಿದ್ದು, ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನು ಅನುಸರಿಸಬೇಕು. ಕೇವಲ ಒಂದು ಸಮೀಕ್ಷೆ ಮಾಡಿದ್ದಕ್ಕಾಗಿ ಹೀಗೆ ದಂಗೆ ಆಗಲು ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ದುರದೃಷ್ಟಕರ ಎಂದು ಜೋಶಿ ಪ್ರತಿಕ್ರಿಯಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post