ಕಲ್ಪ ಮೀಡಿಯಾ ಹೌಸ್ | ಕಾರ್ಗಲ್ |
ಸಮೀಪದ ಮುಪ್ಪಾನೆ ನಿಸರ್ಗಧಾಮ ಮಾರ್ಗದ ತಿರುವಿನಲ್ಲಿ ಮಂಗಳೂರು ಮೂಲದ ಬಸ್ ಪಲ್ಟಿಯಾಗಿ #Bus Accident 40 ಪ್ರವಾಸಿಗರು ಗಾಯಗೊಂಡಿರುವ ಸಂಬಂಧ ಕಾರ್ಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮಂಗಳೂರು ಬಿ.ಸಿ. ರೋಡ್ ಮೂಲದ ಖಾಸಗಿ ಬಸ್‌ನಲ್ಲಿ 49 ಪ್ರವಾಸಿಗರು ಜೋಗ ಜಲಪಾತ ವೀಕ್ಷಿಸಲು ಭಾನುವಾರ ಬೆಳಿಗ್ಗೆ ಹೊರಟು ಅರಳಗೋಡು ಸಮೀಪದ ಭಟ್ಕಳ ಕಾರ್ಗಲ್ ಮಾರ್ಗದಲ್ಲಿ ಬರುತ್ತಿರುವಾಗ ಅತಿ ವೇಗವಾದ ಚಾಲನೆಯಿಂದಾಗಿ ಮುಪ್ಪಾನೆ ತಿರುವಿನಲ್ಲಿ ಪಲ್ಟಿಯಾಗಿದೆ.
Also read: ಶಿಕಾರಿಪುರ | ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಗಳಿಂದ ಕುಮತಿ ಸಾಂಸ್ಕೃತಿಕ ಉತ್ಸವ-2024
ಈ ವೇಳೆ ಸುಮಾರು 40 ಜನರು ಗಾಯಗೊಂಡಿದ್ದು, ಈ ಪೈಕಿ 10 ಪ್ರವಾಸಿಗರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಬಸ್ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಎಲ್ಲಾ ಗಾಯಾಳುಗಳಿಗೆ ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಸಾಗರ ಉಪವಿಭಾಗ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಕಾರ್ಗಲ್ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಹೊಳೆಬಸ್ಸಪ್ಪ ಹೋಳಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post