ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಹತ್ವದ ಬೆಳೆವಣಿಗೆಯೊಂದರಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯವು ಏಕೀಕೃತ ಪಿಂಚಣಿ #Pention ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಪಿಂಚಣಿದಾರರು ಯಾವುದೇ ರಾಜ್ಯದ, ಯಾವುದೇ ಬ್ಯಾಂಕ್’ನಿಂದ ತಮ್ಮ ಪಿಂಚಣಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.
ಈ ಕುರಿತಂತೆ ಕೇಂದ್ರ ಕಾರ್ಮಿಕ ಸಚಿವಾಲಯವು ಮಾಹಿತಿ ಪ್ರಕಟಿಸಿದ್ದು, ಈ ಕ್ರಮದಿಂದಾಗಿ ಪಿಂಚಣಿದಾರರಿಗೆ ಬಹಳಷ್ಟು ಅನುಕೂಲವಾಗಿದೆ.
Also Read>> ನಿಮ್ಮೊಂದಿಗೆ ನಾವಿದ್ದೇವೆ | ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕನಿಗೆ ಹೆಚ್.ಸಿ. ಯೋಗೀಶ್ ಸಾಂತ್ವಾನ
ಯಾವ ರೀತಿಯಿಲ್ಲಿ ಅನುಕೂಲ?
ಈವರೆಗೂ ಇದ್ದ ವ್ಯವಸ್ಥೆಯಂತೆ, ಪಿಂಚಣಿದಾರರು ಪರಿಶೀಲನೆಗಾಗಿ ಇನ್ನು ಮುಂದೆ ಬ್ಯಾಂಕ್’ಗಳಿಗೆ ಹೋಗುವ ಅವಶ್ಯಕತೆಯಿಲ್ಲ. ಬಿಡುಗಡೆಯಾಗುವ ಪಿಂಚಣಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಪಿಂಚಣಿದಾರರು ಒಂದು ಊರಿನಿಂದ ಇನ್ನೊಂದು ಊರು ಅಥವಾ ರಾಜ್ಯಕ್ಕೆ ಹೋಗಿ ನೆಲೆಸಿದರೂ ತಮ್ಮ ಬ್ಯಾಂಕ್ ಬ್ರಾಂಚ್ ಬದಲಿಸುವ ಅಗತ್ಯವಿಲ್ಲ. ಅದಕ್ಕೆ ಬದಲಾಲಾಗಿ ದೇಶದ ಯಾವುದೇ ರಾಜ್ಯ, ಬ್ಯಾಂಕ್, ಶಾಖೆಯಿಂದ ಬೇಕಾದರೂ ಹಣ ಪಡೆಯಬಹುದಾಗಿದೆ.

ಎಷ್ಟು ಪಿಂಚಣಿದಾರರಿಗೆ ಲಾಭ?
ಕೇಂದ್ರ ಕಾರ್ಮಿಕ ಸಚಿವಾಲಯವು, ಈವರೆಗೂ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್’ಒ) 1995ರ ಉದ್ಯೋಗಿಗಳ ಪಿಂಚಣಿ ಯೋಜನೆ ಅಡಿಯಲ್ಲಿ ಹೊಸ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (ಸಿಪಿಪಿಎಸ್) ಹೊರತಂದಿದೆ.
ಇಪಿಎಫ್’ಒ ವ್ಯಾಪ್ತಿಗೆ ಬರುವ 68 ಲಕ್ಷ ಪಿಂಚಣಿದಾರರಿಗೆ ಇದರಿಂದ ಲಾಭ ಆಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post