ಕಲ್ಪ ಮೀಡಿಯಾ ಹೌಸ್ | ಪೋರಬಂದರ್ |
ತರಬೇತಿಯಲ್ಲಿದ್ದ ಭಾರತೀಯ ಕೋಸ್ಟ್ ಗಾರ್ಡ್ #IndianCoastGuard ಸುಧಾರಿತ ಲಘು ಹೆಲಿಕಾಪ್ಟರ್ #LightHelicopter ಪತನಗೊಂಡು ಹೊತ್ತಿ ಉರಿದಿದ್ದು, ಮೂವರು ಸಾವನ್ನಪ್ಪಿರುವ ಘಟನೆ ಗುಜರಾತ್’ನ ಪೋರಬಂದರ್’ನಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಸಶಸ್ತ್ರ ಪಡೆಗಳು ನಿರ್ವಹಿಸುತ್ತಿರುವ ಎಎಲ್’ಎಚ್ ಧ್ರುವ್ #ALHDhruv ತೆರೆದ ಮೈದಾನದಲ್ಲಿ ಅಪಘಾತಕ್ಕೀಡಾಗಿದೆ. ಶೀಘ್ರದಲ್ಲೇ ಅದು ಬೆಂಕಿಯಲ್ಲಿ ಉರಿಯಿತು. ಹೆಲಿಕಾಪ್ಟರ್ ಅಪಘಾತಕ್ಕೀಡಾದಾಗ ದಿನನಿತ್ಯದ ಕಾರ್ಯಾಚರಣೆಯಲ್ಲಿತ್ತು.
Also Read>> ಬಸ್ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಕಾರಣ | ಸಚಿವ ಸಂತೋಷ್ ಲಾರ್ಡ್ ಅಚ್ಚರಿ ಹೇಳಿಕೆ
ಐಸಿಜಿಯ ಏರ್ ಎನ್’ಕ್ಲೇವ್’ನಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದೆ. ಅವರನ್ನು ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆಯ ತನಿಖೆಗೆ ಆದೇಶಿಸಲಾಗಿದ್ದು, ನಂತರವಷ್ಟೇ ಕಾರಣ ತಿಳಿದುಬರಬೇಕಿದೆ. ಅಪಘಾತದಲ್ಲಿ ಸಾವಿಗೀಡಾಗಿರುವವ ಗುರುತು ಇನ್ನೂ ಪತ್ತೆಯಾಗಿಲ್ಲ.
ಈ ಲಘು ಹೆಲಿಕಾಪ್ಟರ್’ನ ವಿನ್ಯಾಸ ಹಾಗೂ ಬಳಸಲಾಗಿರುವ ಲೋಹದ ಸಮಸ್ಯೆಗಳಿದ್ದವು ಎಂದು ಹೇಳಲಾಗಿದೆ.
ಎಎಲ್’ಎಚ್ ಧ್ರುವ್ ಹೆಲಿಕಾಪ್ಟರ್’ನ ಮೊದಲ ಸೇವೆ ಇದಾಗಿದೆ. ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯು ಪಡೆ ಹಾಗೂ ಗಡಿ ಭದ್ರತಾ ಪಡೆಗಳಿಗೆ ಇದೇ ಮಾದರಿಯ ಲಘು ಹೆಲಿಕಾಪ್ಟರನ್ನು ನಿಯೋಜಿಸಲಾಗಿದೆ.
ಮೇಲಿನ ಎಲ್ಲ ವಿಭಾಗಗಳಲ್ಲಿ ಒಟ್ಟು 325 ಎಎಲ್’ಎಚ್ ಧ್ರುವ್ ಹೆಲಿಕಾಪ್ಟರ್ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, 2023 ರಲ್ಲಿ ಸರಣಿ ಘಟನೆಗಳ ನಂತರ ಅವೆಲ್ಲವನ್ನೂ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post