ಕಲ್ಪ ಮೀಡಿಯಾ ಹೌಸ್ | ಮುಂಬೈ |
ಕಳೆದ ಮಂಗಳವಾರ ತಡರಾತ್ರಿ ರೈಲ್ವೆ ನಿಲ್ದಾಣದಲ್ಲಿ ಅತ್ಯಾಚಾರಕ್ಕೆ ಒಳಗಾದ 20 ವರ್ಷದ ಯುವತಿಯ ಗುಪ್ತಾಂಗದಲ್ಲಿ ಸರ್ಜಿಕಲ್ ಬ್ಲೇಡ್ ಹಾಗೂ ಪ್ಲಾಸ್ಟಿಕ್’ನಲ್ಲಿ ಸುತ್ತಿಡಲಾದ ಕಲ್ಲುಗಳು ಪತ್ತೆಯಾಗಿರುವುದು ಆಚ್ಚರಿಗೆ ಕಾರಣವಾಗಿದ್ದು, ಇವುಗಳನ್ನು ಆಕೆಯ ಇರಿಸಿಕೊಂಡಿದ್ದಳು ಎಂಬುದು ಇನ್ನೊಂದು ಆಶ್ಚರ್ಯಕ್ಕೆ ಕಾರಣವಾಗಿದೆ.
ಮಂಗಳವಾರ ತಡರಾತ್ರಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ 20 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ #Rape ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸರು ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ. ಆಕೆಯ ಯೋನಿಯಲ್ಲಿ ಪ್ಲಾಸ್ಟಿಕ್ ಒಳಗೆ ಸುತ್ತಿಡಲಾಗಿದ್ದ ಕಲ್ಲುಗಳು ಮತ್ತು ಸರ್ಜಿಕಲ್ ಬ್ಲೇಡ್ ಕೂಡ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಆಶ್ಚರ್ಯಕರ ವಿಚಾರ ಎಂದರೆ ಯುವತಿಯೇ ತನ್ನ ಯೋನಿಯೊಳಗೆ ಪ್ಲಾಸ್ಟಿಕ್’ನಲ್ಲಿ ಸುತ್ತಿದ ಕಲ್ಲುಗಳು ಹಾಗೂ ಸರ್ಜಿಕಲ್ ಬ್ಲೇಡನ್ನು ಇರಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ನಡೆದಿದ್ದು ಹೇಗೆ?
ಯುವತಿ ಮತ್ತು ಆಟೋರಿಕ್ಷಾ ಚಾಲಕ ಅರ್ನಾಲಾ ಬೀಚ್’ಗೆ ಹೋಗಿ ರಾತ್ರಿ ಅಲ್ಲಿ ಕಳೆಯಲು ಯೋಜಿಸಿದ್ದರು. ಮಹಿಳೆಯ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ ಅವರಿಗೆ ಹೋಟೆಲ್ ಕೊಠಡಿ ಸಿಗಲಿಲ್ಲ. ಆದ್ದರಿಂದ, ಅವರು ಬೀಚ್’ನಲ್ಲಿ ರಾತ್ರಿ ಕಳೆದರು. ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆಟೋರಿಕ್ಷಾ ಚಾಲಕ ಅಪರಾಧ ನಡೆದ ಸ್ಥಳದಿಂದ ಪರಾರಿಯಾಗಿದ್ದಾನೆ.
Also read: ಪಡುಬಿದ್ರಿ | ಸಾಲ ವಾಪಾಸ್ ಕೊಡಲಿಲ್ಲ ಎಂದು ಯಕ್ಷಗಾನ ಕಲಾವಿದನ ಮೇಲೆ ಹಲ್ಲೆ
ಆಕೆಯೇ ಇರಿಸಿಕೊಂಡಿದ್ದೇಕೆ?
ಮೂಲಗಳ ಪ್ರಕಾರ, ಆಟೋ ಚಾಲಕನಿಂದ ಅತ್ಯಾಚಾರಕ್ಕೊಳಗಾಗಿದ್ದಕ್ಕಾಗಿ ಆಕೆಯ ಪೋಷಕರು ಬೈಯುವುದನ್ನು ಮತ್ತು ಹೊಡೆಯುವುದನ್ನು ತಪ್ಪಿಸಲು, ಮಹಿಳೆ ತನ್ನ ದೇಹಕ್ಕೆ ಕಲ್ಲು ಮತ್ತು ಬ್ಲೇಡ್ ಅನ್ನು ಸೇರಿಸಿಕೊಂಡಿದ್ದಾಳೆ. ಯುವತಿ ತನ್ನ ಕುಟುಂಬದೊಂದಿಗೆ ನಲಸೋಪಾರದಲ್ಲಿ ವಾಸಿಸುತ್ತಿದ್ದು, ಪೊಲೀಸರ ಪ್ರಕಾರ ಮಹಿಳೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಲಾಗಿದೆ.
ಮಾಹಿತಿಯ ಪ್ರಕಾರ, ರಾತ್ರಿಯನ್ನು ಹೊರಗೆ ಕಳೆದ ನಂತರ ಮನೆಗೆ ಹಿಂದಿರುಗುವ ಯೋಚನೆಯಿಂದ ಮಹಿಳೆ ಭಯಭೀತರಾಗಿದ್ದರು ಮತ್ತು ಅತ್ಯಾಚಾರವನ್ನು ಒಪ್ಪಿಕೊಳ್ಳಬೇಕಾಯಿತು. ಇದರಿಂದ ತಪ್ಪಿಸಿಕೊಳ್ಳಲು, ಅವರು ಶಸ್ತçಚಿಕಿತ್ಸಾ ಚಾಕುವನ್ನು ಖರೀದಿಸಿ ಅದನ್ನು ಅವರ ಯೋನಿಯೊಳಗೆ ಚಾಕುವಿನೊಂದಿಗೆ ಕಲ್ಲುಗಳನ್ನೂ ಸಹ ಸೇರಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಯುವತಿಗೆ ಗುಪ್ತಾಂಗದಲ್ಲಿ ನೋವು ಮತ್ತು ರಕ್ತಸ್ರಾವವನ್ನು ಕಾಣಿಸಿಕೊಂಡಾಗ ಕುಟುಂಬಸ್ಥರು ಆಕೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ತಪಾಸಣೆ ನಡೆಸಿದ ನಂತರ ವಿಚಾರ ಹೊರಬಿದ್ದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















