ಕಲ್ಪ ಮೀಡಿಯಾ ಹೌಸ್ | ವೈಟ್ ಫೀಲ್ದ್, ಬೆಂಗಳೂರು |
ವೈದ್ಯೋ ನಾರಾಯಣ ಹರಿ ಅಂತಾರೆ… ಅದು ಇವತ್ತು ಒಬ್ಬ ಉಬರ್ #Uber ಡ್ರೈವರ್ ಪಾಲಿಗೆ ಮಾತ್ರ ಇಂದು ಅಕ್ಷರಶಃ ನಿಜವಾಗಿದೆ. ಮೆಡಿಕವರ್ ಆಸ್ಪತ್ರೆಯ ಇಬ್ಬರು ವೈದ್ಯರು ದೇವರಾಗಿ ಆತನ ಪ್ರಾಣವನ್ನು ಉಳಿಸಿದ್ದಾರೆ.
ಉಬರ್ ಡ್ರೈವರ್’ಗೆ ಗಾಡಿ ಓಡಿಸುತ್ತಾ ಇರುವಾಗ ಮೂರ್ಛೆರೋಗ #Epilepsy ಬಂದು ಗಾಡಿ ಓಡಿಸೋದಕ್ಕೆ ಕಂಟ್ರೋಲ್ ತಪ್ಪಿ, ಲೈಟ್ ಕಂಬಕ್ಕೆ ಗುದ್ದಿದ್ದಾರೆ. ಅದೇ ಉಬರ್ ಕಾರಿನಲ್ಲಿದ್ದ ಮೆಡಿಕವರ್ ಆಸ್ಪತ್ರೆಯ #MedicoverHospital ವೈದ್ಯರಾದ ಡಾ. ರಾಜಸ್ವೆಲ್ವ ರಾಜನ್ ಹಾಗೂ ಡಾ. ರವೀಂದ್ರರವರ ಸಮಯ ಪ್ರಜ್ಷೆಯಿಂದ ಡ್ರೈವರ್ ಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿದ, ಆಗುವ ಅಪಾಯವನ್ನು ತಪ್ಪಿಸಿದ್ದಾರೆ.
Also Read>> ಸಿಎಂ ಸಿದ್ಧರಾಮಯ್ಯಗೆ ಬಿಗ್ ರಿಲೀಫ್ | ಮುಡಾ ಪ್ರಕರಣ ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ ನಿರಾಕರಣೆಬೆಳಿಗ್ಗೆ ಮನೆಯಿಂದ ಆಸ್ಪತ್ರೆಗೆ ಉಬರ್ ನಲ್ಲಿ ಬರುತ್ತಾ ಇದ್ದ ವೈಟ್ ಫಿಲ್ದ್ ನಲ್ಲಿರುವ #whitefield ಮೆಡಿಕವರ್ ಆಸ್ಪತ್ರೆಯ ಹಿರಿಯ ಆರ್ಥೋಪೆಡಿಕ್ ಸರ್ಜನ್ ರವೀಂದ್ರ ಪುಟ್ಟಸ್ವಾಮಯ್ಯ ಹಾಗೂ ಹಿರಿಯ ಸಲಹೆಗಾರ ವೈದ್ಯ ಡಾ. ರಾಜ ಸ್ವೆಲ್ಪರಾಜನ್ ಗರುಡಾಚಾರ್ಯಪಾಳ್ಯದಿಂದ ಬೆಳೀಗ್ಗೆ 9.30ಕ್ಕೆ ಮೆಡಿಕವರ್ ಆಸ್ಪತ್ರೆಗೆ ಉಬರ್ ಬುಕ್ ಮಾಡಿಕೊಂಡು ಬರುತ್ತಾ ಇದ್ದರು. ಕಾರು ಹತ್ತಿದಾಗ ಇಬ್ಬರು ವೈದ್ಯರು, ಡ್ರೈವರ್ ಬಳಿ ಸಹಜ ಮಾತುಕತೆ ನಡೆಸುತ್ತಾ ಇದ್ದರು.
ಸ್ವಲ್ಪ ಹೊತ್ತಿನ ಬಳಿಕ ಡ್ರೈವರ್ ಮಾತಾಡೋದನ್ನು ನಿಲ್ಲಿಸಿದರು. ಡ್ರೈವರ್ ಗೆ #Driver ಕಾರು ಓಡಿಸಲು ಸಾಧ್ಯವಾಗದೇ ಸಂಪೂರ್ಣ ಕಂಟ್ರೋಲ್ ತಪ್ಪಿ ಹೋಯಿತು. ಇದನ್ನು ಗಮನಿಸಿದ ವೈದ್ಯರು ಡ್ರೈವರ್ ಗೆ ಏನೋ ಸಮಸ್ಯೆಯಾಗ್ತಾ ಇದೆ ಎಂದು ಅಂದುಕೊಳ್ಳುತ್ತಾ , ಡ್ರೈವರ್ ಗೆ ಏನಾಯ್ತು ಎಂದು ಕೇಳುವಷ್ಟರಲ್ಲಿ, ಕಾರು ಮುಂದಕ್ಕೆ ಹೋಗುವ ಬದಲು, ರಸ್ತೆ ಬದಿಯಲ್ಲಿ ನಿಂತಿದ್ದ ಬೇರೆ ಕಾರಿಗೆ ಗುದ್ದಿಹೋಯ್ತು. ಅಲ್ಲದೇ ಅಲ್ಲೇ ಇದ್ದ ಲೈಟ್ ಕಂಬಕ್ಕೆ ಗುದ್ದಿ ಕಾರು ಹಿಂದಕ್ಕೆ ಬಂತು. ಅಷ್ಟು ಆಗುವಷ್ಟರಲ್ಲಿ ಕಾರಿನ ಹಿಂದೆ ಕೂತಿದ್ದ ಡಾ. ರವೀಂದ್ರ ಪುಟ್ಟಸ್ವಾಮಯ್ಯ ಅವರು ಕಾರಿನ #Car ಹ್ಯಾಂಡ್ ಬ್ರೇಕ್ ಹಾಕಿದರು.ಹಾಗಾಗೀ ಆಗಬೇಕಾದ ಆಪಾಯ ತಪ್ಪಿ ಹೋಯಿತು. ಕಾರಿನಲ್ಲಿದ್ದ ಹಾಗೂ ಹೊರಗಡೆ ಗುದ್ದಿನ ಕಾರಿನವರಿಗಾಗಲೀ, ಪಾದಚಾರಿಗಾಗಲೀ ಯಾವುದೇ ಸಮಸ್ಯೆಯಾಗಿಲ್ಲ. ಅದೃಷ್ಟವಾಶಾತ್ ವೈದ್ಯರ ಸಮಯ ಪ್ರಜ್ಞೆಯಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಡ್ರೈವರ್ ಗೆ ಅಷ್ಟರಲ್ಲಾಗಲೇ ಬಾಯಿಯಲ್ಲಿ ನೊರೆ ಬರೋದಕ್ಕೆ ಶುರುವಾಗಿ ಸಂಪೂರ್ಣವಾಗಿ ಮೂರ್ಛೆ ಹೋಗಿದ್ದರು.
ಕೂಡಲೇ ಡಾ. ರಾಜಸ್ವೆಲ್ವ ರಾಜನ್ ಡ್ರೈವರ್ ಅನ್ನು ಹಿಡಿದರು ಹಾಗೂ ಡಾ. ರವೀಂದ್ರ ಪುಟ್ಟಸ್ವಾಮಯ್ಯ ಅವರು ಡ್ರೈವರನ್ನು ಕಾರಿನ ಹಿಂದೆ ಮಲಗಿಸಿ ಸೂಕ್ತ ಚಿಕಿತ್ಸೆ ನೀಡಿದರು. ಸ್ವಲ್ಪ ಹೊತ್ತಿನ ಬಳಿಕ ಅಲ್ಲೇ ಇದ್ದು ಅವರನ್ನು ಸರಿಯಾದ ಚಿಕಿತ್ಸೆ ನೀಡಿ, ಯಾವೆಲ್ಲ ಔಷಧಿ ಕೊಡಬೇಕೆಂದು ಸಲಹೆ ಕೂಡ ನೀಡಿದರು. ಡ್ರೈವರ್ ಸ್ವಲ್ಪ ಸುಧಾರಿಸಿದ ನಂತರ ಕ್ಯಾಬ್ ಮಾಡಿಕೊಟ್ಟು, ಕೈಯಲ್ಲಿ ಸ್ವಲ್ಪ ದುಡ್ಡು ಕೊಟ್ಟು ಮನೆಗೆ ಕಳುಹಿಸಿ ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post