ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಬಿಜೆಪಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಕ್ಫ್ ತಿದ್ದುಪಡಿ ಮಸೂದೆಯನ್ನು #Waqf Amendment Bill ಇಂದು ಲೋಕಸಭೆಯಲ್ಲಿ #Parliament ಮಂಡಿಸಲಾಗಿದ್ದು, ಪ್ರತಿಪಕ್ಷಗಳು ಇದನ್ನು ವಿರೋಧಿಸಿದ ಬೆನ್ನಲ್ಲೇ, ದೇಶದ ಹಲವು ಕಡೆಗಳಲ್ಲಿ ಮುಸಲ್ಮಾನರು ಇದನ್ನು ಬೆಂಬಲಿಸಿದ್ದಾರೆ.
#WATCH | Madhya Pradesh: Women in Bhopal come out in support of Waqf (Amendment) Bill to be presented today in Lok Sabha. pic.twitter.com/CUaUA3Rtkh
— ANI (@ANI) April 2, 2025
ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ದೇಶದ ಹಲವೆಡೆ ಕಳೆದ ಮರ್ನಾಲ್ಕು ದಿನಗಳಿಂದಲೂ ಈ ನಡೆಗೆ ವಿರೋಧ ವ್ಯಕ್ತವಾಗುತ್ತಲೇ ಇದೆ.
ಮೊನ್ನೆಯಷ್ಟೇ ನಡೆದ ರಂಜಾನ್ ಹಬ್ಬದ ದಿನದಂದೂ ಸಹ ಮುಸ್ಲಿಮರು ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ್ದರು. ಹೀಗೆ ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯದಿಂದ ಭಾರೀ ವಿರೋಧವನ್ನು ಪಡೆದುಕೊಂಡಿತ್ತು.
Also read: ಸುನ್ನಿ ಈದ್ಗಾ ಮೈದಾನ ಸಂರಕ್ಷಿಸಲು ಸಹಕರಿಸಿ | ಜಾಮಿಯಾ ಮಸ್ಜಿದ್ ಸಮಿತಿ ಮನವಿ
ಆದರೆ ಇಂದು ಮಸೂದೆ ಮಂಡನೆಯಾಗುವ ವೇಳೆ ಮುಸ್ಲಿಂ ಮಹಿಳೆಯರು ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲವನ್ನು ವ್ಯಕ್ತಪಡಿಸಿದ ಘಟನೆ ಮಧ್ಯಪ್ರದೇಶದ ಭೂಪಾಲ್’ನಲ್ಲಿ ನಡೆದಿದೆ.
ರಸ್ತೆ ಮಧ್ಯೆ ಮೋದಿ #Modi ಭಾವಚಿತ್ರದ ಮೇಲೆ ನಾವು ಮೋದಿ ಬೆಂಬಲಿಸುತ್ತೇವೆ, ನಾವು ವಕ್ಫ್ ತಿದ್ದುಪಡಿ ಮಸೂದೆ ಬೆಂಬಲಿಸುತ್ತೇವೆ ಎಂಬ ಬರಹಗಳುಳ್ಳ ಪ್ಲಕಾರ್ಡ್’ಗಳನ್ನು ಹಿಡಿದು ಮೋದಿ ಜೀ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post