ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಡೀ ದೇಶದಲ್ಲಿ ಭಾರೀ ಕುತೂಹಲ ಕೆರಳಿಸಿ, ಪರ ವಿರೋಧಕ್ಕೆ ಕಾರಣವಾಗಿದ್ದ ಮಹತ್ವದ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಇಂದು ರಾತ್ರಿ ಪಾಸ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆ ಪರ ಮತ ಚಲಾಯಿಸಲು ಉಪಸ್ಥಿತರಿರದೆ ಇದ್ದರೂ ಸಹ, ಮಸೂದೆ ಪರ 288 ಹಾಗೂ ವಿರುದ್ಧ 232 ಮತ ಚಲಾವಣೆ ಆಯಿತು.
ವಕ್ಫ್ ತಿದ್ದುಪಡಿ ಮಸೂದೆಯನ್ನು “ಅಸಂವಿಧಾನಿಕ” ಎಂದು ಕರೆದ ವಿರೋಧ ಪಕ್ಷಗಳನ್ನು ಟೀಕಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಕ್ಫ್ ಆಸ್ತಿಗೆ ಸಂಬಂಧಿಸಿದ ಕಾನೂನು ದಶಕಗಳಿಂದ ಅಸ್ತಿತ್ವದಲ್ಲಿದೆ ಮತ್ತು ನ್ಯಾಯಾಲಯಗಳು ಅದನ್ನು ರದ್ದುಗೊಳಿಸಿಲ್ಲ ಮತ್ತು ಅಂತಹ ಪದಗಳನ್ನು ಹಗುರವಾಗಿ ಬಳಸಬಾರದು ಎಂದು ಹೇಳಿದರು.
ಲೋಕಸಭೆಯಲ್ಲಿ ಸುಮಾರು 12 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಚರ್ಚೆಗೆ ಉತ್ತರಿಸಿದ ರಿಜಿಜು, ಮಸೂದೆ ಅಂಗೀಕಾರವಾದ ನಂತರ ಮುಸ್ಲಿಂ ಸಮುದಾಯದ ಬಡವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತಾರೆ ಎಂದು ಹೇಳಿದರು. ಮಸೂದೆಯನ್ನು ಅಂಗೀಕರಿಸಲು ಸದನವು ಮಧ್ಯರಾತ್ರಿಯನ್ನು ಮೀರಿ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post