ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ವಾಸಿಸುತ್ತಿರುವುದರಿಂದ ಮಾಹಿತಿಗಳು ನಮ್ಮ ಬೆರಳ ತುದಿಯಲ್ಲಿ ಸುಲಭವಾಗಿ ಲಭ್ಯವಾಗಿರುವುದರಿಂದ ನಮ್ಮ ಮಕ್ಕಳು ಏನು ಯೋಚಿಸಬೇಕು? ಹೇಗೆ ಯೋಚಿಸಬೇಕು? ಎಂಬುದನ್ನು ಕಲಿಯಬೇಕಿದೆ ಎಂದು ಮಗೇಶ್ ಪಾಂಡ್ಯನ್ ಹೇಳಿದರು.
ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ “ಫ್ಹನ್ ರೋಬೋಟಿಕ್ಸ್ ಮತ್ತು ಕೋಡಿಂಗ್” ತರಬೇತಿ ಕಾರ್ಯಗಾರದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಅವರು, ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ರೋಬೋಟಿಕ್ಸ್ನ ಪ್ರಮುಖ ಅಂಶವಾಗಿದೆ. ಕೋಡಿಂಗ್ ಎನ್ನುವುದು ಕಂಪ್ಯಟರ್ಗಳೊಂದಿಗೆ ಸಂವಹನ ನಡೆಸುವ ಮಾರ್ಗವಾಗಿದೆ ಹಲವಾರು ಪ್ರೋಗ್ರಾಂಮಿಂಗ್ ಭಾಷೆಗಳು ಸ್ಕ್ರ್ಯಾಚ್, ಪೈಥಾನ್, ಹೆಚ್ ಟಿ ಎಮ್ ಎಲ್, ಚಾಟ್ ಜಿಪಿಟಿ ಇತ್ಯಾದಿ ವಿಷಯಗಳನ್ನು ಪಠ್ಯ ಆಧಾರಿತವಾಗಿ ಅಳವಡಿಸಿಕೊಂಡು ವಿಮರ್ಶಾತ್ಮಕ ಚಿಂತನಾ ಕೌಶಲ್ಯ ಒಳಗೊಂಡಂತೆ ಅನೇಕ ಕೌಶಲ್ಯಗಳನ್ನು ಪ್ರಾಯೋಗಿಕ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳ ಏಕಾಗ್ರಾತೆ ಹೆಚ್ಚಿಸುವುದು ಹೇಗೆ ಎಂಬುದನ್ನು ಶ್ರವಣ ಶೆಟ್ಟಿ ಮತ್ತು ಸೋಹನ್ ರವರು ಶಿಕ್ಷಕರಿಗೆ ಅತ್ಯುತ್ತಮ ತರಬೇತಿ ನೀಡಿದರು.
ಕಂಪ್ಯೂಟರ್ ಜ್ಞಾನದ ಆಕರ್ಷಕ ಕ್ಷೇತ್ರವಾದ ರೋಬೋಟಿಕ್ಸ್ ಮತ್ತು ಕೋಡಿಂಗ್ ಒಂದಕ್ಕೊಂದು ಹೆಣೆದುಕೊಂಡಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಗುವಿಗೆ STEM ಆಧಾರಿತ ಕಲಿಕೆಯನ್ನು ಪರಿಚಯಸಲು ರೋಬೋಟಿಕ್ಸ್ ಉತ್ತಮ ಮಾರ್ಗವಾಗಿದೆ ಎಂದು ಅರಿತು ಶಿವಮೊಗ್ಗದ ವಿವಿಧ ಸಿಬಿಎಸ್ಇ ಶಾಲೆಯಗಳಿಂದ ಆಗಮಿಸಿದ ಶಿಕ್ಷಕರಿಗೆ ಕಾರ್ಯಗಾರವನ್ನು ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ಸಂಯೋಜಕರು, ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post