ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಕಾರ್ಕಳ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಕಳ ಪೇಟೆಯ ವಿವಿಧ ಕಡೆಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾಯಕ್ರಮ ನಡೆಯಿತು.
ಕಾರ್ಕಳದ ಅನಂತಶಯನ, ಆನೆಕೆರೆ, ಬಂಡೀಮಠ, ಸರ್ವಜ್ಞ ವೃತ್ತ, ಬೈಪಾಸ್ ನವೋದಯ ಸರ್ಕಲ್‌ಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಮತ್ತು ಚತುಶ್ಚಕ್ರ ವಾಹನ ಸವಾರರಿಗೆ ಸೀಟ್ ಬೆಲ್ಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಗೈಡ್ಸ್ ಆಯುಕ್ತರಾದ ಜ್ಯೋತಿ ಪೈ, ಕಾರ್ಕಳ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಉಪಾಧ್ಯಕ್ಷರಾದ ಜಗದೀಶ್ ಹೆಗ್ಡೆ ಹಾಗೂ ಸಾವಿತ್ರಿ ಮನೋಹರ್, ಕ್ರೈಸ್ಟ್‌ಕಿಂಗ್ ರೋವರ್ ಲೀಡರ್ ಉಪನ್ಯಾಸಕ ದೀಪಕ್, ರೇಂಜರ್ ಲೀಡರ್ ಉಪನ್ಯಾಸಕಿ ಕು. ಅಭಿನಯ, ಸ್ಕೌಟ್ ಶಿಕ್ಷಕರಾದ ಕೃಷ್ಣ ಪ್ರಸಾದ್, ಪ್ರಕಾಶ್, ಸ್ಕೌಟ್ಸ್ ಶಿಕ್ಷಕಿ ಆಶಾ ಜ್ಯೋತಿ ಹಾಗೂ ಸಂಸ್ಥೆಯ ಉಪನ್ಯಾಸಕರು ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post