ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ #Heavy Rain ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಕೆಲವು ತಾಲೂಕುಗಳಲ್ಲಿ ಭಾರೀ ವಾಹನ ಸಂಚಾರವನ್ನು #Heavy Vehicle Traffic ನಿಷೇಧಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರು ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸೆಪ್ಟೆಂಬರ್ 30ರವರೆಗೂ ಭಾರೀ ಸಂಚಾರ ನಿಷೇಧದ ವಿವರಗಳು ಇಂತಿವೆ.

ರಾಷ್ಟ್ರೀಯ ಹೆದ್ದಾರಿ 169ರ ಕಿಮೀ 123.80ರಿಂದ ಕಿಮೀ 141.00ರವರೆಗೆ ಅಂದರೆ ತನಿಕೋಡಿನಿದ ಎಸ್.ಕೆ. ಬಾರ್ಡರ್’ವರೆಗೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ.
ಬದಲಿ ಮಾರ್ಗದ ವ್ಯವಸ್ಥೆ ಹೀಗಿದೆ:
- ಚಿಕ್ಕಮಗಳೂರಿನಿಂದ ಬರುವ ಭಾರೀ ವಾಹನಗಳು ಬಾಳೆಹೊನ್ನೂರು- ಮಾಗುಂಡಿ- ಕಳಸ- ಕುದುರೆಮುಖ -ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.
- ನರಸಿಂಹರಾಜಪುರ ಕಡೆಯಿಂದ ಬರುವ ಭಾರೀ ವಾಹನಗಳು ಬಾಳೆಹೊನ್ನೂರು- ಮಾಗುಂಡಿ- ಕಳಸ- ಕುದುರೆಮುಖ- ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.
- ಕೊಪ್ಪ ಕಡೆಯಿಂದ ಬರುವ ಭಾರೀ ವಾಹನಗಳು ಕೊಪ್ಪ- ಜಯಪುರ- ಬಾಳೆಹೊನ್ನೂರು-ಮಾಗುಂಡಿ- ಕಳಸ- ಕುದುರೆಮುಖ- ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post