ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಳಗಾವಿ-ಮೀರಜ್ ನಡುವಿನ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಇಲಾಖೆ #South Western Railway Department ಗುಡ್ ನ್ಯೂಸ್ ನೀಡಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಳಗಾವಿ ಮತ್ತು ಮೀರಜ್ ನಡುವೆ ಈ ಕೆಳಗಿನ ಕಾಯ್ದಿರಿಸದ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರವನ್ನು ಹಾಲಿ ಇರುವ ಸಮಯ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರೆಸಲು ನಿರ್ಧರಿಸಿದೆ.
- ರೈಲು ಸಂಖ್ಯೆ 07301/07302 ಬೆಳಗಾವಿ – ಮೀರಜ್ – ಬೆಳಗಾವಿ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್.
- ರೈಲು ಸಂಖ್ಯೆ 07303/07304 ಬೆಳಗಾವಿ – ಮೀರಜ್ – ಬೆಳಗಾವಿ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್.
ಈ ಸೇವೆಗಳು, ಮೊದಲು ಜುಲೈ 31, 2025 ರವರೆಗೆ ಸಂಚರಿಸಲಿವೆ ಎಂದು ತಿಳಿಸಲಾಗಿತ್ತು. ಈಗ ಇವುಗಳನ್ನು ಆಗಸ್ಟ್ 1, 2025 ರಿಂದ ಡಿಸೆಂಬರ್ 31, 2025 ರವರೆಗೆ ವಿಸ್ತರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post