ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಮಹತ್ವದ ಬೆಳವಣಿಗೆಯೊಂದರಲ್ಲಿ ಚಿಕ್ಕಮಗಳೂರು – ಯಶವಂತಪುರ- ಚಿಕ್ಕಮಗಳೂರು ನಡುವಿನ ಕಾಯ್ದಿರಿಸದ ರೈಲನ್ನು ಅರಳಗುಪ್ಪೆ ನಿಲ್ದಾಣದಲ್ಲಿ ನಿಲುಗಡೆ ಮುಂದುವರೆಸಲು ನಿರ್ಧರಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಅರಳಗುಪ್ಪೆ ಹಾಲ್ಟ್ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ಮುಂದುವರೆಸಲಾಗುವುದು ಎಂದಿದೆ.
16239/16240 ಸಂಖ್ಯೆಯ ಚಿಕ್ಕಮಗಳೂರು- ಯಶವಂತಪುರ- ಚಿಕ್ಕಮಗಳೂರು ಕಾಯ್ದಿರಿಸದ ಎಕ್ಸ್’ಪ್ರೆಸ್’ಗೆ ಅರಳಗುಪ್ಪೆ ಹಾಲ್ಟ್ ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲು ನಿರ್ಧರಿಸಿದೆ.
ಈ ತಾತ್ಕಾಲಿಕ ನಿಲುಗಡೆಯು ಜುಲೈ 06, 2025 ರಿಂದ ಜನವರಿ 05, 2026 ರವರೆಗೆ ಹಾಲಿ ವೇಳಾಪಟ್ಟಿಯಂತೆ ಜಾರಿಯಲ್ಲಿ ಇರುತ್ತದೆ ಎಂದು ಇಲಾಖೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post