ಕಲ್ಪ ಮೀಡಿಯಾ ಹೌಸ್ | ಮೈಸೂರು/ಬೆಳಗಾವಿ |
ರಾಣಿಬೆನ್ನೂರು ರೈಲು ನಿಲ್ದಾಣದಲ್ಲಿ ಹಳಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಹಲವು ರೈಲುಗಳ ಹಲವು ದಿನಗಳ ಕಾಲ ಸೇವೆಗಳು ನಿಯಂತ್ರಿಸಲ್ಪಡುತ್ತವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಯಾವೆಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ವಿವರ ಇಂತಿವೆ.
17326 ಸಂಖ್ಯೆಯ ಮೈಸೂರು – ಬೆಳಗಾವಿ ಎಕ್ಸ್’ಪ್ರೆಸ್ ರೈಲು 2025ರ ಸೆಪ್ಟೆಂಬರ್ 15 ರಿಂದ 19, 21 ರಿಂದ 26, 28 ರಿಂದ ಅಕ್ಟೋಬರ್ 03 ಹಾಗೂ ಅಕ್ಟೋಬರ್ 05 ರಿಂದ 10, 12, 13 ರಂದು ಪ್ರಯಾಣ ಆರಂಭಿಸುವ ಈ ರೈಲು ಮಾರ್ಗಮಧ್ಯೆ 50 ನಿಮಿಷ ನಿಯಂತ್ರಿಸಲ್ಪಡುತ್ತದೆ.
11005 ಸಂಖ್ಯೆಯ ದಾದರ್ – ಪುದುಚೇರಿ ಎಕ್ಸ್’ಪ್ರೆಸ್ 2025ರ ಸೆಪ್ಟೆಂಬರ್ 14, 15, 21, 22, 28, 29 ಹಾಗೂ ಅಕ್ಟೋಬರ್ 05, 06, 12 ರಂದು ಪ್ರಯಾಣ ಆರಂಭಿಸುವ ಈ ರೈಲು ಮಾರ್ಗಮಧ್ಯೆ 40 ನಿಮಿಷ ನಿಯಂತ್ರಿಸಲ್ಪಡುತ್ತದೆ.
11021 ಸಂಖ್ಯೆಯ ದಾದರ್ – ತಿರುನೆಲ್ವೆಲಿ ಎಕ್ಸ್’ಪ್ರೆಸ್ ರೈಲು 2025ರ ಸೆಪ್ಟೆಂಬರ್ 16, 17, 20, 23, 24, 27, 30 ಹಾಗೂ ಅಕ್ಟೋಬರ್ 01, 04, 07, 08, 11 ರಂದು ಪ್ರಯಾಣ ಆರಂಭಿಸುವ ಈ ರೈಲು ಮಾರ್ಗಮಧ್ಯೆ 40 ನಿಮಿಷ ನಿಯಂತ್ರಿಸಲ್ಪಡುತ್ತದೆ.
11035 ಸಂಖ್ಯೆಯ ದಾದರ್ – ಮೈಸೂರು ಎಕ್ಸ್’ಪ್ರೆಸ್ ರೈಲು 2025ರ ಸೆಪ್ಟೆಂಬರ್ 18, 25 ಹಾಗೂ ಅಕ್ಟೋಬರ್ 02, 09 ರಂದು ಪ್ರಯಾಣ ಆರಂಭಿಸುವ ಈ ರೈಲು ಮಾರ್ಗಮಧ್ಯೆ 40 ನಿಮಿಷ ನಿಯಂತ್ರಿಸಲ್ಪಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















