ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಿದ್ಧ ಗಂಧರ್ವಯಕ್ಷಾದ್ವೈರಸುರೈಮರೈರಪಿ|
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||
ಒಂಬತ್ತನೇ ದಿನ ನವಮಿಯಂದು ಸಿದ್ಧಿದಾತ್ರಿಯನ್ನು ಪೂಜಿಸುತ್ತೇವೆ. ಶಿವ ಪುರಾಣದ ಪ್ರಕಾರ ಶಿವನೂ ಕೂಡ ಇವಳಿಂದಲೇ ಸರ್ವಸಿದ್ಧಿಗಳನ್ನು ಪಡೆದಿದ್ದನು. ನವದುರ್ಗೆಯರಲ್ಲಿ ಕೊನೆಯ ರೂಪವಾದ್ದರಿಂದ ದೇವಿಯ ಪೂಜೆಯಿಂದ ಸರ್ವ ಸಿದ್ಧಿಗಳೂ ದೊರಕಿ ಭಕ್ತನು ಇಹ-ಪರ ಎರಡೂ ಲೋಕದ ಸುಖ ಅನುಭವಿಸುತ್ತಾನೆ ಎಂದು ಹೇಳುತ್ತಾರೆ.
ಚತುರ್ಭುಜೆಯಾಗಿರುವ ದೇವಿಯು ಒಂದು ಕೈಲಿ ಪುಸ್ತಕ, ಒಂದರಲ್ಲಿ ಗದೆ ಮತ್ತೊಂದರಲ್ಲಿ ಬಿಲ್ಲೆ ಮತ್ತು ಕಮಲವನ್ನು ಹಿಡಿದಿರುವ ದೇವಿ ನಮ್ಮ ಸುರಕ್ಷತೆಯನ್ನು ಕಾಪಾಡುವವಳಾಗಿದ್ದಾಳೆ, ಅಸಹಜ ಘಟನೆಗಳು ತೊಂದರೆಗಳನ್ನು ನಿವಾರಿಸುವ ದೇವಿಗೆ ಗುಲಾಬಿ ಬಣ್ಣ ಪ್ರಿಯವಾಗಿದ್ದು ಎಳ್ಳು ಮತ್ತು ಎಳ್ಳಿನ ಪದಾರ್ಥಗಳಿಂದ ಪ್ರೀತಳಾಗುತ್ತಾಳೆ. ಜಾಜಿ ಹೂವು ಅಥವಾ ರಾತ್ರಿ ಮಲ್ಲಿಗೆ ದೇವಿಗೆ ಅತ್ಯಂತ ಪ್ರಿಯವಾದ ಪುಷ್ಟವಾಗಿದೆ.
ಶಿವನ ಬೇಡಿಕೆಯಂತೆ ದೇವಿಯು ಶಿವನ ಶರೀರದ ಅರ್ಧ ಭಾಗದಲ್ಲಿ ತಾನು ನೆಲೆಸಿ ಶಿವನನ್ನು ಅರ್ಧನಾರೀಶ್ವರನ್ನಾಗಿ ಮಾಡಿರುತ್ತಾಳೆ. ಸಿದ್ಧಿದಾತ್ರಿಯು ನಮ್ಮಲ್ಲಿ ಸಹಸ್ರಾರ ಚಕ್ರವನ್ನು ಪ್ರಚುರಗಳಿಸಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ಸರಳ ಮಾಡಿ ಸಿದ್ಧಿಗಳನ್ನುಕೊಡುವುದರಿಂದ ಅವಳ ಮಹತ್ವವು ಹೆಚ್ಚಿನದ್ದಾಗಿದೆ.
ದೇವಿಯನ್ನು ಪಠಿಸುವ ಮಂತ್ರ “ಓಂ ಸಿದ್ಧಿದಾತ್ರೈ ನಮಃ” ಎಂಬುದಾಗಿ ಇದ್ದು ಅವಳನ್ನು “ಯಾ ದೇವಿ ಸರ್ವ ಭೂತೇಷು ಮಾ ಸಿದ್ಧಿದಾತ್ರೈ ನಮಃ ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದು ಸ್ತುತಿಸಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post