ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಬ್ಬಯ್ಯ ಆಸ್ಪತ್ರೆಯ ಭಾಗವಾಗಿ ಆ.12ರಂದು ರೈನ್ ಬೋ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಎಂಬ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕ್ಲಿನಿಕ್‍ನ್ನು ಆರಂಭಿಸಲಾಗುವುದು ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಅನುಭವ್ ಜನ್ನು ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.12ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪು ರಸ್ತೆಯಲ್ಲಿರುವ ಕ್ಲಿಫ್ ಎಂಬಸಿ ಪಕ್ಕದಲ್ಲಿರುವ ಋಷ್ಯಶೃಂಗ ಆರ್ಕೇಡ್‍ನಲ್ಲಿ ಈ ಕ್ಲಿನಿಕ್ #Clinic ಶುಭಾರಂಭಗೊಳ್ಳಲಿದೆ. ಸುಬ್ಬಯ್ಯ ಆಸ್ಪತ್ರೆಯ ಆಡಳಿತ ಮಂಡಳಿಯ ಡಾ. ನಾಗೇಂದ್ರ ದಂಪತಿಗಳು ಇದನ್ನು ಉದ್ಘಾಟಿಸಲಿದ್ದಾರೆ ಎಂದರು.
ಈ ಕ್ಲಿನಿಕ್‍ನಲ್ಲಿ ಚರ್ಮ #Skin ಮತ್ತು ಕೂದಲಿನ ಚಿಕಿತ್ಸೆಗೆ ಸಂಬಂಧಪಟ್ಟಂತೆ ಅನುಭವಿ ತಜ್ಞ ವೈದ್ಯರು ಸಲಹೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ಅತ್ಯಾಧುನಿಕ ಪ್ರೊಸೀಜರ್ ರೂಮ್‍ಗಳು ಹೊಂದಿವೆ. ಜಾಗತಿಕ ಮಟ್ಟದ ಅಭಿವೃದ್ಧಿ ಹೊಂದಿದ ಚರ್ಮ ಮತ್ತು ಕೇಶ ಚಿಕಿತ್ಸಾ #HariTreatment ಸಾಧನಗಳು ಇಲ್ಲಿ ಲಭ್ಯವಿರುತ್ತವೆ ಎಂದರು.
ಕ್ಲಿನಿಕ್ ಆರಂಭದ ಹಿನ್ನಲೆಯಲ್ಲಿ ಅ.12ರಿಂದ ನವೆಂಬರ್ 12ರ ವರೆಗೆ ಎಲ್ಲಾ ಚಿಕಿತ್ಸಾ ದರಗಳ ಮೇಲೆ ಶೇ.10ರಷ್ಟು ರಿಯಾಯಿತಿ ಕೂಡ ಇರುತ್ತದೆ ಎಂದರು.
ನಮ್ಮ ಕ್ಲಿನಿಕ್‍ನಲ್ಲಿ ಕೂದಲು ಕಸಿ, ಕೂದಲು ಉದುರುವುದನ್ನು ತಡೆಗಟ್ಟುವುದು, ಹೆಡ್ ಥ್ರೆಡ್ ಚಿಕಿತ್ಸೆ, ಚರ್ಮ ಸಂಬಂಧಿತ ಚಿಕಿತ್ಸೆಗಳು ಬೊಟಾಕ್ಸ್ ಚಿಕಿತ್ಸೆ, ಲೇಸರ್ ಹೇರ್ ಚಿಕಿತ್ಸೆ, ವ್ಯಾಂಪೈರ್ ಫೇಶಿಯಲ್, ಮೊಡವೆ ಕಲೆಗಳು, ಪಿಗ್ಮೆಂಟೇಷನ್ ಮತ್ತು ಬ್ರೈಟ್ನಿಂಗ್ ಸೇರಿದಂತೆ ಕೂದಲಿಗೆ, ದೇಹಕ್ಕೆ, ಚರ್ಮಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಳು ಆಧುನಿಕ ರೀತಿಯಲ್ಲಿ ದೊರೆಯುತ್ತದೆ. ಮಹಿಳೆಯರಿಗೆ ಸಂಬಂಧಿಸಿದಂತೆ ದೇಹದ ಭಾಗಗಳ ವಿವಿಧ ರೀತಿಯ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ ಎಂದರು.
ಹೆಚ್ಚಿನ ವಿವರಕ್ಕೆ ಮತ್ತು ಮಾಹಿತಿಗೆ ಮೊ.8951958418ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಬ್ಬಯ್ಯ ಆಸ್ಪತ್ರೆಯ ಮುಖ್ಯಸ್ಥ ಡಾ. ನಾಗೇಂದ್ರ, ವಿಶೇಷ ತಜ್ಞರುಗಳಾದ ಡಾ. ತೃಪ್ತಿ, ಡಾ. ಐಶ್ವರ್ಯ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post