ಕಲ್ಪ ಮೀಡಿಯಾ ಹೌಸ್ | ಮಧ್ಯಪ್ರದೇಶ |
ದೇಶದಲ್ಲಿ ಮಹಿಳೆಯರು, ಚಿಕ್ಕ ಹೆಣ್ಣುಮಕ್ಕಳುಗಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಮಧ್ಯಪ್ರದೇಶದ ಶವಾಗಾರವೊಂದರಲ್ಲಿ ಹೆಣ್ಣಿನ ಮೃತದೇಹದ ಮೇಲೆ ಕಾಮುಕನೊಬ್ಬ ಅತ್ಯಾಚಾರ ನಡೆದಿರುವ ಘೋರ ಘಟನೆ ನಡೆದಿದೆ.
ಮಧ್ಯಪ್ರದೇಶದ ಬುಹಾರನ್ಪುರ ಜಿಲ್ಲೆಯ ಶವಾಗಾರದಲ್ಲಿ ಇರಿಸಲಾಗಿದ್ದ ಮಹಿಳೆಯ ಮೃತ ದೇಹದ ಮೇಲೆ ವ್ಯಕ್ತಿಯೊಬ್ಬರ ಅತ್ಯಾಚಾರ ನಡೆಸಿದ್ದು, ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಳೆದ ವರ್ಷದ ಎಪ್ರಿಲ್’ನಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಸ್ಟ್ರೆಚರ್ ಮೇಲೆ ಇರಿಸಲಾಗಿತ್ತು. ಅಲ್ಲಿಂದ ಶವವನ್ನು ಎಳೆದೊಯ್ದ ವ್ಯಕ್ತಿ ಅದರ ಮೇಲೆ ಅತ್ಯಾಚಾರ ಎಸಗಿದ್ದಾನೆ.ಇಂತಹ ಘೋರ ಕೃತ್ಯ ಎಸಗಿದ ವ್ಯಕ್ತಿಯನ್ನು ಭೌರಘಾಟ್ ಸಮೀಪದ ನೀಲೇಶ್ ಭಿಲಾಲ್(25) ಎಂದು ಗುರುತಿಸಲಾಗಿದೆ. ಈ ಘೋರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ಆತನನ್ನು ಪತ್ತೆ ಮಾಡಲಾಗಿದೆ.
ಆ ಮಹಿಳೆಯ ಶವವನ್ನು ಪಕ್ಕಕ್ಕೆ ತೆಗೆದುಕೊಂಡು ಹೋಗಿ ಸಿಸಿಟಿವಿಯ ವ್ಯಾಪ್ತಿಯಿಂದ ದೂರಕ್ಕೆ ಎಳೆದುಕೊಂಡು ಹೋಗಿ ಅಲ್ಲಿ ಆ ವ್ಯಕ್ತಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಅವನು ಮತ್ತೆ ಶವವನ್ನು ಸ್ಟ್ರೆಚರ್ ಬಳಿ ನೆಲದ ಮೇಲೆ ಎಳೆದುಕೊಂಡು ಬಂದಿದ್ದಾನೆ.
ಈ ವರ್ಷ ಅಕ್ಟೋಬರ್’ನಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ವೈದ್ಯಕೀಯ ಅಧಿಕಾರಿಯೊಬ್ಬರು. ಡಾ. ಆದಿಯಾ ದಾವರ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post